ಕ್ರೀಡೆ ಸುದ್ದಿ

IND Vs BAN T20 ಪಂದ್ಯ : ದಾಖಲೆ ಬರೆದ ಭಾರತ ತಂಡ

Share It

ದೆಹಲಿ : ಶನಿವಾರ ಹೈದರಾಬಾದ್ ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ   ನಡೆದ, ಭಾರತ ಮತ್ತು ಬಾಂಗ್ಲಾದ ನಡುವಿನ ಮೂರು ಪಂದ್ಯಗಳ ಟಿ20  ಸರಣಿಯ ಕೊನೆಯ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತ ಬರೋಬ್ಬರಿ 133 ರನ್ ಗಳಿಂದ ಭರ್ಜರಿ ಜಯ ಸಾದಿಸುವ ಮೂಲಕ ದಾಖಲೆ ಸೃಷ್ಟಿಸಿದೆ. ಈ ಮೂಲಕ ಸರಣಿಯನ್ನು 3 – 0 ಅಂತರದಿಂದ ವೈಟ್ ವಾಶ್ ಮಾಡಿದೆ.

ಸಂಚು ಸ್ಯಾಮ್ಸನ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರ ಸಿಡಿಲಬ್ಬರಕ್ಕೆ ನಡುಗಿದ ಬಾಂಗ್ಲಾದೇಶದ ಬೌಲರ್ ಗಳು 20 ಓವರ್ ಗಳಲ್ಲಿ ಬಿಟ್ಟು ಕೊಟ್ಟಿದ್ದು ಬರೋಬ್ಬರಿ 297 ರನ್ ಗಳು. ಈ ಮೂಲಕ ಟಿ 20 ಇತಿಹಾಸದಲ್ಲಿ ಭಾರತ ಅತಿ ಹೆಚ್ಚು ರನ್ ಸಿಡಿಸಿದ ಎರಡನೇ ತಂಡವಾಗಿದೆ. ಟೆಸ್ಟ್ ಆಡುವ ರಾಷ್ಟ್ರಗಳಲ್ಲಿ ಟಿ20 ಯಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಮೊದಲನೇ ತಂಡವಾಗಿ ಭಾರತ ದಾಖಲೆ ಸೃಷ್ಟಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ, ಆರಂಭದಲ್ಲೇ ಯುವ ಆಟಗಾರ ಅಭಿಷೇಕ್ ಶರ್ಮ ಅವರ ವಿಕೆಟ್ ಅನ್ನು ಕಳೆದುಕೊಂಡಿತು. ಬಳಿಕ ದಾಂಡಿಗನಂತೆ ಕಿಸ್ ಕಚ್ಚಿ ನಿಂತ ಸಂಜು ಸ್ಯಾಮ್ಸನ್ ಆಡಿದ 47 ಬಾಲ್ ಗಳಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್ ಸಹಿತ ಬರೋಬ್ಬರಿ 111 ಸಿಡಿಸಿದರು. ಇದಲ್ಲದೆ ರಿಷಾದ್ ಹುಸೇನ್ ಅವರ ಒಂದೇ ಓವರ್ ನಲ್ಲಿ ಬರೋಬ್ಬರಿ ಐದು ಸಿಕ್ಸರ್ ಸಿಡಿಸಿ ಮಿಂಚಿದರು.

ಬಳಿಕ ಕಣಕ್ಕಿಳಿದ ನಾಯಕ ಸೂರ್ಯಕುಮಾರ್ ಯಾದವ್, 35 ಬಾಲ್ ಗಳಲ್ಲಿ 75 ರನ್ ಬಾರಿಸಿದರು. ನಂತರ ಕೊನೆಯಲ್ಲಿ ಬಂದ ಹಾರ್ದಿಕ್ ಪಾಂಡ್ಯ ಕೇವಲ 18 ಬಾಲ್‌ಗಳಲ್ಲಿ 47 ರನ್ ಸಿಡಿಸಿದರು. ಇನ್ನು ಯುವ ಆಟಗಾರ ರಿಯನ್ ಪರಾಗ್ 13 ಬಾಲ್‌ಗಳಲ್ಲಿ 34 ರನ್ ಚಚ್ಚಿದರು. ಕೊನೆಗೆ ಸೀಮಿತ 20 ಓವರ್ ಗಳಲ್ಲಿ ಟೀಮ್ ಇಂಡಿಯಾದ ಸ್ಕೋರ್ ಬೋರ್ಡ್ ನಲ್ಲಿ ದಾಖಲಾಗಿದ್ದು ಬರೋಬ್ಬರಿ 297 ರನ್ ಗಳು.

ಇನ್ನು ಎರಡನೇ ಇನ್ನಿಂಗ್ಸ್ ನಲ್ಲಿ ಟೀಮ್ ಇಂಡಿಯ ನೀಡಿದ್ದ ಬೃಹತ್ ಮಟ್ಟದ ಟಾರ್ಗೆಟನ್ನು ಬೆನ್ನತ್ತಲು ಬಂದ ಬಾಂಗ್ಲಾದೇಶದ ಆರಂಬಿಕ ಆಟಗಾರರಿಗೆ ಭಾರತದ ಯುವ ವೇಗಿ ಮಯಂಕ್ ಯಾದವ್ ಮೊದಲ ಬಾಲ್ ನಲ್ಲಿಯೇ ಆಘಾತ ನೀಡಿದರು. ಬಾಂಗ್ಲಾದೇಶದ ಪರ ಲಿಟನ್ ದಾಸ್ ಮತ್ತು ಹೃದೋಯ್ ಅವರಿಬ್ಬರ ಹೋರಾಟ ಬಿಟ್ಟರೆ ಇನ್ನು ಯಾವ ಬ್ಯಾಟರ್ ಕೂಡ ಕ್ರೀಸ್ ಕಚ್ಚಿ ನಿಲ್ಲಲಿಲ್ಲ.

ಬಾಂಗ್ಲಾದೇಶ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 164 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಕೊನೆಗೆ ಭಾರತ ಬರೋಬ್ಬರಿ 133 ರಗಳ ಭರ್ಜರಿ ಜಯ ಸಾಧಿಸಿತು. ಟೀಮ್ ಇಂಡಿಯಾದ ಪರ ಬೌಲಿಂಗ್ ಮಾಡಿದ ರವಿ ಬಿಷ್ನೋಯಿ 3 ವಿಕೆಟ್ ಮತ್ತು ಮಯಾಂಕ್ ಯಾದವ್ 2 ವಿಕೆಟ್ ಪಡೆದು ಮಿಂಚಿದರು.

ಶಿವರಾಜು ವೈ. ಪಿ
ಎಲೆರಾಂಪುರ


Share It

You cannot copy content of this page