ಅಪರಾಧ ಸಿನಿಮಾ ಸುದ್ದಿ

ಸೆಂಟ್ರಲ್ ಜೈಲಿನಲ್ಲಿ ಐಷಾರಾಮಿ ವ್ಯವಸ್ಥೆ: ದರ್ಶನ್ ಮತ್ತು ಗ್ಯಾಂಗ್ ಹಿಂಡಲಗಾ ಜೈಲಿಗೆ ಶಿಫ್ಟ್

Share It

ಬೆಂಗಳೂರು: ಕೊಲೆ‌ ಆರೋಪಿ ನಟ ದರ್ಶನ್ ಅವರ ಜೈಲಿನ ಫೋಟೋ ವೈರಲ್ ಆದ ಹಿನ್ನೆಲೆಯಲ್ಲಿ ಡಿ ಗ್ಯಾಗ್ ಅನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲು ತಯಾರಿ ನಡೆಸಿದೆ.

ರೇಣುಕಾಸ್ವಾಮಿ ಕೊಲೆಯಾದಾಗಲೇ, ಈ ಕೊಲೆಯಲ್ಲಿ ನ್ಯಾಯ ಸಿಗುವುದು ಅನುಮಾನ ಎಂದು ಇಡೀ ರಾಜ್ಯವೇ ಮಾತನಾಡಿಕೊಂಡಿತ್ತು. ನಟ ದರ್ಶನ್ ಉಳಿಸಲು ಕೆಲವು ರಾಜಕಾರಣಿಗಳು ನಡೆಸಿದ ಪ್ರಯತ್ನ ಆ ಅನುಮಾನವನ್ನು ಹೆಚ್ಚಿಸಿತು. ಆದರೆ, ಪೊಲೀಸರ ಕಾರ್ಯವೈಖರಿ ಇಡೀ ರಾಜ್ಯವೇ ಪೊಲೀಸರ ಬಗ್ಗೆ ನಂಬಿಕೆಯಿಂದ ನೋಡುವಂತೆ ಮಾಡಿತ್ತು.

ಆದರೆ, ನ್ಯಾಯಾಂಗ ಬಂಧನದಲ್ಲಿರುವ ಕೊಲೆ ಆರೋಪಿ ನಟ ದರ್ಶನ್ ಗೆ ಜೈಲಿನಲ್ಲಿ ಸಿಗುತ್ತಿರುವ ಸೌಲಭ್ಯಗಳು ಸಾರ್ವಜನಿವಾಗಿ ಮತ್ತದೇ ಅನುಮಾನ ಮೂಡುವಂತೆ ಮಾಡಿದೆ. ಜೈಲಿನ ಫೋಟೋ ವೈರಲ್ ಆಗುತ್ತಿದ್ದಂತೆ, ಒಂದು ವಾಟ್ಸಾಪ್ ಕರೆಯ ವಿಡಿಯೋ, ಮತ್ತೊಂದು ಫೋಟೋ ವೈರಲ್ ಆಗಿವೆ.

ಈ ಎಲ್ಲ ಬೆಳವಣಿಗೆ ರಾಜ್ಯ ಸರಕಾರಕ್ಕೆ ಮುಜುಗರ ತರಿಸವಂತಹ ಬೆಳವಣಿಗೆಯಾಗಿದೆ. ಸರಕಾರವೇ ದರ್ಶನ್ ಗೆ ರಾಜಾತಿಥ್ಯ ನೀಡುತ್ತಿದೆ ಎಂಬ ಭಾವನೆ ಬರುವಂತೆ ಮಾಡಿದೆ. ಹೀಗಾಗಿ, ಡಿ ಗ್ಯಾಂಗ್ ಅನ್ನು ಬೇರೆ ಜೈಲಿಗೆ ಶೀಪ್ಟ್ ಮಾಡುವ ಆಲೋಚನೆಯಲ್ಲಿ ಸರಕಾರ ಸಿದ್ಧತೆ ನಡೆಸುತ್ತಿದೆ ಎನ್ನಲಾಗುತ್ತಿದೆ.


Share It

You cannot copy content of this page