ಕ್ರೀಡೆ ಸುದ್ದಿ

ಅಜಯ್ ರಾತ್ರಾ ಬಿಸಿಸಿಐನ ಆಯ್ಕೆ ಸಮಿತಿಯ ಹೊಸ ಸದಸ್ಯರಾಗಿ ನೇಮಕ

Share It

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ )ಅಜಿತ್ ಅಗರ್ ಕರ್ ನೇತೃತ್ವದ ಇದು ಜನರ ಆಯ್ಕೆ ಸಮಿತಿಗೆ ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸಮನ್ ಅಜಯ್ ರಾತ್ರಾ ನೇಮಕಗೊಂಡಿದ್ದಾರೆ.

ಬಿಸಿಸಿಐನ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ಚೇತನ್ ಶರ್ಮ ಅವರ ನಂತರ ಬಿಸಿಸಿಐ ಜನವರಿ ತಿಂಗಳಲ್ಲಿ  ಆಯ್ಕೆ ಸಮಿತಿಯ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಈ ಸಮಯದಲ್ಲಿ ಅಜಯ್ ರಾತ್ರಾ ಅವರೂ ಕೂಡ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದರು.

ನಂತರ ಇದೀಗ ಅಜಯ್ ರಾತ್ರಾ ಅಜಿತ್ ಅಗರ್ ಕರ್ ನೇತೃತ್ವದ ಪುರುಷರ ಆಯ್ಕೆ ಸಮಿತಿಯಲ್ಲಿ ಉತ್ತರ ವಲಯದ ಪ್ರತಿನಿಧಿಯಾಗಿ ಮಂಗಳವಾರ ನೇಮಕಗೊಂಡಿದ್ದಾರೆ.

ಬಳಿಕ ಮಾತನಾಡಿದ ಇವರು, “ಟೀಮ್ ಇಂಡಿಯಾದ ಆಯ್ಕೆ ಸಮಿತಿಯಲ್ಲಿ ಸ್ಥಾನ ಸಿಕ್ಕಿರುವುದು ನನಗೆ ದೊಡ್ಡ ಗೌರವ ತಂದು ಕೊಟ್ಟಿದೆ. ಇದಲ್ಲದೆ ಭಾರತೀಯ ಕ್ರಿಕೆಟ್ ತಂಡಕ್ಕೆ ನಾನು ಕೊಡುಗೆ ನೀಡಲು ಉತ್ಸುಕನಾಗಿದ್ದೇನೆ” ಎಂದರು.

ಅಜಯ್ ರಾತ್ರಾ ಅವರ ಕ್ರಿಕೆಟ್ ಕೆರಿಯರ್ ನೋಡುವುದಾದರೆ 2002ರಲ್ಲಿ ಇವರು ಒಟ್ಟು 6 ಟೆಸ್ಟ್ ಪಂದ್ಯಗಳು ಮತ್ತು 12 ಏಕದಿನ ಪಂದ್ಯಗಳನ್ನು ಭಾರತದ ಪರ ಆಡಿದ್ದಾರೆ. ಇದಲ್ಲದೆ ವೆಸ್ಟ್ ಇಂಡಿಸ್ ತಂಡದ ವಿರುದ್ಧದ ಪಂದ್ಯವೊಂದರಲ್ಲಿ ಶತಕ ಸಿಡಿಸಿರುವುದು ವಿಶೇಷವಾಗಿದೆ.


Share It

You cannot copy content of this page