ರೇಣುಕಸ್ವಾಮಿ ಅಂಗಲಾಚುತ್ತಿರುವ ಫೋಟೊ ವೈರಲ್: ಡಿ ಗ್ಯಾಂಗ್ ಕ್ರೌರ್ಯ ಅನಾವರಣ
ಬೆಂಗಳೂರು: ರೇಣುಕಸ್ವಾಮಿಗೆ ದರ್ಶನ್ ಮತ್ತು ಗ್ಯಾಂಗ್ ಹಿಂಸೆ ಮಾಡಿ ಕೊಲೆ ಮಾಡಿದ್ದು, ಈ ಕುರಿತು ಕೈ ಮುಗಿದು ಅಂಗಲಾಚುತ್ತಿರುವ ಹಾಗೂ ನಿತ್ರಾಣಗೊಂಡು ಅಂಗಾತ ಬಿದ್ದಿರುವ ಚಿತ್ರಗಳು ಲಭ್ಯವಾಗಿವೆ.
ದೋಷಾರೋಪ ಪಟ್ಟಿ ಸಲ್ಲಿಸಿದ ಬೆನ್ನಲ್ಲೇ ಪೊಟೊಗಳು ಲಭ್ಯವಾಗಿದ್ದು, ಇದ್ಉ ಪ್ರಕರಣದ ತಿವ್ರತೆಯನ್ನು ತಿಳಿಸುತ್ತಿದೆ. ಮತ್ತು ಇದು ಪವಿತ್ರ ಗೌಡ ಹಾಗೂ ದರ್ಶನ್ ಗ್ಯಾಂಗ್ ವಿರುದ್ಧ ಪ್ರಬಲ ಸಾಕ್ಷಿ ಸಿಕ್ಕಂತಾಗಿದೆ.
ಕೃತ್ಯದ ವೇಳೆ ಪವಿತ್ರ ಗೌಡಳ ಮ್ಯಾನೇಜರ್ ಕೆ.ಪವನ್ ಪೋಟೊ ತೆಗೆದು ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಮಾಲೀಕ ವಿನಯ್ ಹಾಗೂ ಪ್ರದೊಷ್ ಅವರ ಮೊಬೈಲ್ಗೆ ಕಳುಹಿಸಿದ್ದರು. ರೇಣುಕಸ್ವಾಮಿ ಮೃತಪಟ್ಟ ನಂತರ ಪೋಟೊ ಡಿಲೀಟ್ ಮಾಡಿದ್ದು, ದತ್ತಾಂಶ ಮರು ಸಂಗ್ರಹದ ಸಂದರ್ಭದಲ್ಲಿ ಪೋಟೊ ಲಭ್ಯವಾಗಿದೆ. ಇದು ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಆಗುವ ಸಾಧ್ಯತೆಯೂ ಇದೆ.


