ಸ್ನೇಹಜ್ಯೋತಿ ಅಂಧರ ಶಾಲೆಗೆ ಪ್ರತಿ ದಿನ ಐದು ಸಾವಿರ ರು. ಸಹಾಯ ಮಾಡುತ್ತಿರುವ ಸ್ನೇಹಕೂಟ
ಜನ್ಮದಿನ, ಮದುವೆ ವಾರ್ಷಿಕೋತ್ಸವ ಬಂದಾಗಲೆಲ್ಲಾ ವಿಜೃಂಭಣೆ ಕಾರ್ಯಕ್ರಮ ಮಾಡಿ ಲಕ್ಷಾಾಂತರ ರುಪಾಯಿ ಖರ್ಚು ಮಾಡುವುದು ಇತ್ತೀಚಿನ ದಿನಗಳಲ್ಲಿ ಒಂದು ಫ್ಯಾಷನ್ ಆಗಿದೆ. ಅಂತಹ ಕಾರ್ಯಕ್ರಮಗಳನ್ನೇ ನೆಪವಾಗಿಸಿಕೊಂಡು ಮೋಜು ಮಸ್ತಿ ಮಾಡಿ ನೀರಿನಂತೆ ದುಡ್ಡು ಸುರಿಯುವ ಜನರಿಗೇನು ಕಡಿಮೆ ಇಲ್ಲ. ಆದರೆ ಇಲ್ಲೊೊಂದು ಯುವಕರ ಗುಂಪು ಜನ್ಮದಿನ, ಮದುವೆ ವಾರ್ಷಿಕೋತ್ಸವದಂತಹ ಕಾರ್ಯಕ್ರಮಗಳಿಗೆ ಖರ್ಚಾಗುವ ಅಲ್ಪ ಹಣವನ್ನು ಅನಾಥ ಮಕ್ಕಳಿಗಾಗಿ ಮೀಸಲಾಗಿಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶ ಹೊಂದಿದ್ದಾರೆ.
ಹೌದು..! ಬೆಳಗಾವಿ ಜಿಲ್ಲೆೆಯ ಅಥಣಿಯಲ್ಲಿರುವ ಸ್ನೇಹಜ್ಯೋತಿ ಅಂಧ ಮತ್ತು ಅನಾಥ ಮಕ್ಕಳ ಶಾಲೆಯ ವಿದ್ಯಾಾರ್ಥಿಗಳ ಊಟ, ಜೀವನ ಕೌಶಲ ಕಲಿಕೆ, ಕಂಪ್ಯೂಟರ್ ಶಿಕ್ಷಣ ಮತ್ತು ಓದಿನ ಖರ್ಚಿಗಾಗಿ 365 ಸದಸ್ಯರ ವಾಟ್ಸಾಪ್ ಗ್ರೂಪ್ ಒಂದನ್ನು ರಚಿಸಿಕೊಂಡು ಪ್ರತಿದಿನ ಒಬ್ಬೊಬ್ಬರು ಕನಿಷ್ಠ ಐದು ಸಾವಿರ ರುಪಾಯಿಗಳನ್ನು ಈ ಮಕ್ಕಳಿಗಾಗಿ ಮೀಸಲಿಡುತ್ತಿದ್ದಾರೆ. ಆ ಮೂಲಕ ಈ ಸಂಸ್ಥೆೆಗೆ ಆಸರೆ ಬಯಸಿ ಬಂದಿರುವ ಅದೆಷ್ಟೋೋ ಮಕ್ಕಳ ಆರೋಗ್ಯ, ಶೈಕ್ಷಣಿಕ ಜೀವನಕ್ಕೂ ಭದ್ರ ಬುನಾದಿ ಹಾಕುತ್ತಿದ್ದಾರೆ.
ಅಂಧರ ಶಾಲೆಗೆ ಪ್ರತಿದಿನ ಐದು ಸಾವಿರ ರು. ಸಹಾಯ: ಇನ್ನೊಂದು ವಿಶೇಷವೆಂದರೆ ಈ ವಾಟ್ಸಾಪ್ ಗುಂಪಿನ ಸದಸ್ಯರು ಯಾರೊಬ್ಬರೂ ತಮ್ಮ ಖಾತೆಗಳಿಗೆ ಹಣ ಜಮೆ ಮಾಡಿಕೊಳ್ಳುವುದಿಲ್ಲ. ನೇರವಾಗಿ ಆಶ್ರಮದ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವ ಮೂಲಕ ಪಾರದರ್ಶಕತೆ ಕಾಯ್ದುಕೊಂಡು ಬರುತ್ತಿದ್ದಾರೆ. ಈ ಸ್ನೇಹ ಬಳಗ ಕೊಟ್ಟ ಹಣದಿಂದ ಊಟ ಮಾತ್ರವಲ್ಲದೇ ಕಂಪ್ಯೂಟರ್, ಬ್ರೈಲ್ ಶಿಕ್ಷಣಕ್ಕೆೆ ಬೇಕಾಗುವ ಸಾಮಗ್ರಿ, ಮಕ್ಕಳ ಆರೋಗ್ಯ ಕಾಳಜಿ, ಪ್ರತಿ ತಿಂಗಳು ಔಷಧಿ ಖರೀದಿಗೂ ಬಳಸಿಕೊಳ್ಳಲು ಇಚ್ಛಿಸಿರುವುದು ಇನ್ನೊಂದು ವಿಶೇಷ. 1998ರಲ್ಲಿ ಆರಂಭಗೊಂಡ ಈ ಅಂಧರ ಶಾಲೆಯಲ್ಲಿ ಇಲ್ಲಿಯವರೆಗೆ ಸುಮಾರು 500ಕ್ಕೂ ಹೆಚ್ಚು ಅಂಧ ಮಕ್ಕಳು ವಿದ್ಯೆೆ ಪಡೆದಿದ್ದಾರೆ. ಸದ್ಯ 40 ಮಕ್ಕಳು ಇಲ್ಲಿ ವಿದ್ಯೆೆ ಪಡೆಯುತ್ತಿದ್ದು, ಈ ಮಕ್ಕಳಿಗೆ ವಿದ್ಯೆೆ ನೀಡುವುದರೊಂದಿಗೆ ವಸತಿ, ಬಟ್ಟೆೆ,ಆಹಾರ ಸೇರಿ ಎಲ್ಲವನ್ನು ವ್ಯವಸ್ಥೆೆ ಮಾಡಿಕೊಳ್ಳಲು ಸಹೃದಯರ ಸಹಕಾರವೇ ಶಕ್ತಿ.
‘ವಿಶ್ವದಲ್ಲಿ ಅಂದಾಜು 45 ಮಿಲಿಯನ್ ಜನರು ದೃಷ್ಟಿ ವಿಕಲಚೇತನರಿದ್ದಾರೆ ಮತ್ತು ಅವರಲ್ಲಿ ಮೂವರಲ್ಲಿ ಒಬ್ಬರು ಭಾರತದಲ್ಲಿದ್ದಾರೆ. ಭಾರತದಲ್ಲಿ ಅಂದಾಜು 15 ಮಿಲಿಯನ್ ಜನರು ಅಂಧರು ಇದ್ದಾರೆ. ಈ ಜನರಿಗೆ ಮೂಲಭೂತ ಶಿಕ್ಷಣದ ಏಕೈಕ ಸಾಧನವೆಂದರೆ ಬ್ರೈಲ್. ಸ್ಥಳೀಯ ಭಾಷೆಗಳಲ್ಲಿ ಬ್ರೈಲ್ ಪುಸ್ತಕಗಳ ಲಭ್ಯತೆ ಅತ್ಯಂತ ಸೀಮಿತವಾಗಿದೆ ಮತ್ತು ಗ್ರಾಾಮೀಣ ಬಡವರಿಗೆ ಇದು ಅಸ್ತಿತ್ವದಲ್ಲಿಲ್ಲ. ಶಾಲಾ ಪಠ್ಯ ಪುಸ್ತಕಗಳ ಹೊರತಾಗಿ ಅಂಧ ಮಕ್ಕಳು ಓದುವ ವಸ್ತುಗಳಿಂದ ಸಂಪೂರ್ಣವಾಗಿ ವಂಚಿತರಾಗಿದ್ದಾರೆ. ಅಂತಹ ಮಕ್ಕಳು ಹೊಟ್ಟೆೆ ತುಂಬ ತಿಂದು ನಮ್ಮ ನಿಮ್ಮಂತೆಯೇ ಓದಿ ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರಬೇಕು’ ಎನ್ನುತ್ತಾರೆ ಈ ಗುಂಪಿನ ಸದಸ್ಯ ಪ್ರವೀಣ ಪಡನಾಡ.

‘ಇದು ಕ್ರಿಶ್ಚಿಯನ್ ಧರ್ಮದಿಂದ ನಡೆಸುವ ಸಂಸ್ಥೆೆಯಾಗಿದ್ದು, ಇಲ್ಲಿ ಧರ್ಮ ಪರಿವರ್ತನೆಯಾಗುತ್ತದೆ ಎಂದು ಅನೇಕರಿಗೆ ಯೋಚನೆ ಬಂದಿರಬಹುದು. ಆದರೆ 1998ರಿಂದ ಈ ಶಾಲೆಯನ್ನು ಗಮನಿಸುತ್ತಿದ್ದು, ಈವರೆಗೂ ಯಾವುದೇ ಒಬ್ಬ ವಿದ್ಯಾರ್ಥಿಯೂ ಧರ್ಮ ಪರಿವರ್ತನೆಗೆ ಒಳಗಾಗಿಲ್ಲ. ಶಾಲೆಗೆ ಸೇರುವಾಗ ಮಗು ಯಾವ ಧರ್ಮದಲ್ಲಿ ಇರುತ್ತದೆಯೋ ಅಲ್ಲಿಂದ ಹೊರಹೋಗುವಾಗಲೂ ಅದೇ ಧರ್ಮದಲ್ಲಿ ಇರುತ್ತದೆ. ಮುಂದೆಯೂ ಆ ಧರ್ಮದಲ್ಲೇ ಬದುಕು ಕಟ್ಟಿಕೊಳ್ಳುತ್ತಾನೆ. ಹೀಗಾಗಿ ಆ ಕುರಿತು ಯಾವುದೇ ಗೊಂದಲ ಬೇಡ’ ಎನ್ನುತ್ತಾರೆ ವಾಟ್ಸಾಪ್ ಗುಂಪಿನ ಮತ್ತೊಬ್ಬ ಸದಸ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಚಿನ್ ಪಾಟೀಲ್.
ಈಗಾಗಲೇ ಈ ವಾಟ್ಸಾಪ್ ಗುಂಪಿಗೆ 123 ಸದಸ್ಯರು ಸೇರಿಕೊಂಡಿದ್ದು, 365 ಸದಸ್ಯರ ಸೇರಿಸಿಕೊಳ್ಳುವ ಗುರಿ ಹೊಂದಿದ್ದಾರೆ. ಈ ಗುಂಪಿಗೆ ಸೇರಬಯಸುವವರು 8971351001, 8971385068 ಸಂಪರ್ಕಿಸಬಹುದು.
ಕೈಲಾದ ಅಳಿಲು ಸೇವೆ ‘ಹಸಿವು ಎಂಬುದು ಯಾವುದೇ ಧರ್ಮಕ್ಕೆೆ ಸಂಬಂಧಿಸಿದ್ದಲ್ಲ. ಅಂಧತ್ವ, ಅಂಗವಿಕಲತೆ ಯಾವುದೇ ಜಾತಿಗೆ ಸಂಬಂಧಿಸಿದಲ್ಲ. ಮಾನವಿಯತೆ ಎಂಬುದು ಈ ದೇಶದ ಸಂಸ್ಕೃತಿ. ನಮ್ಮ ತಾತ, ಮುತ್ತಾಾತ ಕಾಲದಿಂದಲೂ ಈ ಸಮಾಜದಲ್ಲಿ ಬಡವರಿಗೆ, ಶೋಷಿತರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಾ ಬಂದಿದೆ.

ನನ್ನ ತಂದೆ, ತಾಯಿ ಮತ್ತು ಹಿರಿಯರ ಆಶೀರ್ವಾದದಿಂದ ಇಂತಹ ಸೇವೆ ಮಾಡಬೇಕು ಎಂಬ ಪರಿಕಲ್ಪನೆ ಬಂದಿದೆ. ದೀಪದಿಂದ ದೀಪವ ಹಚ್ಚಬೇಕು ಮಾನವ ಎನ್ನುವ ಪರಿಕಲ್ಪನೆಯೊಂದಿಗೆ ಈ ಅಂಧ ಮಕ್ಕಳಿಗೆ ಕೈಲಾದಷ್ಟು ಸಹಾಯ ಮಾಡಬೇಕೆಂದು ಸ್ನೇಹಿತರೆಲ್ಲ ಸೇರಿ ನಿರ್ಧಾರ ಮಾಡಿದ್ದೇವೆ. ಇದು ನಮ್ಮ ಕೈಲಾದ ಅಳಿಲು ಸೇವೆಯಷ್ಟೇ.
ಪ್ರತಿ ತಾಲೂಕಿಗೆ ಈ ರೀತಿ ಮಾನವೀಯ ಹೃದಯ ಹೊಂದಿದ ಸ್ನೇಹಿತರು ಸೇರಿ ಗ್ರೂಪ್ ಮಾಡಿಕೊಂಡು ನೇರವಾಗಿ ಆಶ್ರಮಕ್ಕೆೆ ಕೊಟ್ಟು, ಅದರ ಸದುಪಯೋಗದ ಬಗ್ಗೆೆ ಗ್ರೂಪ್‌ಗೆ ಮಾಹಿತಿ ಹಂಚಿದರೆ ಅನಾಥ ಮಕ್ಕಳ ಹಸಿವಿಗೆ ಶಾಶ್ವತ ಪರಿಹಾರವಾಗುತ್ತದೆ’ ಎನ್ನುತ್ತಾರೆ ವಾಟ್ಸಾಪ್ ಗುಂಪಿನ ಪರಿಕಲ್ಪನೆ ರೂವಾರಿ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಪ್ರವೀಣ್ ಸುಭಾಷ್ ಪಡನಾಡ.