ಸುದ್ದಿ

ಚನ್ನಪಟ್ಟಣದ ದೇವರ ಹೊಸಹಳ್ಳಿಯಲ್ಲಿ ವಿನೂತನ ‘ಅಂಬೇಡ್ಕರ್ ಹಬ್ಬ’

Share It

ಬೆಂಗಳೂರು: ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದೇವರ ಹೊಸಹಳ್ಳಿ ಗ್ರಾಮದಲ್ಲಿ ವಿನೂತನ ಅಂಬೇಡ್ಕರ್ ಹಬ್ಬದ ಆಚರಣೆಯನ್ನು ವಿಜೃಂಭಣೆಯಿಂದ ನಡೆಸಲಾಯಿತು.

ಗ್ರಾಮದ ಬೀದಿಗಳನ್ನು ಸಿಂಗರಿಸಿ, ಪ್ರತಿ ಮನೆತ ಬಾಗಿಲಿಗೆ ರಂಗೋಲಿಯಿಂದ ಅಲಂಕರಿಸಿ ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡಲಾಗಿತ್ತು. ಚನ್ನಪಟ್ಟಣ ನಗರದಿಂದ ದೇವರ ಹೊಸಹಳ್ಳಿ ಗ್ರಾಮದವರೆಗೆ ಅಂಬೇಡ್ಕರ್ ಪ್ರತಿಮೆಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ನಟ, ಸಾಮಾಜಿಕ ಹೋರಾಟಗಾರ ಚೇತನ್ ಸೇರಿ ಅನೇಕ ಗಣ್ಯರು ಭಾಗವಹಿಸಿದ್ದರು.

ವೇದಿಕೆ ಕಾರ್ಯಕ್ರಮದಲ್ಲಿ ಮೈಸೂರಿನ ಉರಿಪೆದ್ದಲಿಂಗ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಅಂಬೇಡ್ಕರ್ ಹಬ್ಬ ಅಕ್ಷರದ ಹಬ್ಬವಾಗಬೇಕು. ಮುಂದಿನ ಹಬ್ಬದ ವೇಳೆಗೆ ನಿಮ್ಮೂರಿನಲ್ಲಿ ಹತ್ತಾರು ಜನ ಅಕ್ಷರಸ್ಥ, ಅಧಿಕಾರಸ್ಥ ಮಕ್ಕಳು ರೂಪುಗೊಳ್ಳಬೇಕು. ಆಗ ಮಾತ್ರ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಶಿಕ್ಷಣದ ಆಶಯ ಈಡೇರುತ್ತದೆ. ಅದನ್ನು ಸಾಕಾರಗೊಳಿಸುವ ಜವಾಬ್ದಾರಿ ನಿಮ್ಮದು ಎಂದು ತಿಳಿಸಿದರು.

ತಿಂಗಳಿಗೊಂದು ಹಬ್ಬ ಮಾಡಿಕೊಂಡು ಸಾಲ ಮಾಡಿಕೊಳ್ಳುವ ಬದಲು, ವರ್ಷಕ್ಕೊಮ್ಮೆ ಇಂತಹ ಅಂಬೇಡ್ಕರ್ ಅರಿವಿನ ಹಬ್ಬವನ್ನು ಆಚರಿಸಿ, ನಿಮ್ಮ ಮಕ್ಕಳಿಗೆ ಶಿಕ್ಷಧ ಬೆಳಕು ನೀಡಿ, ನಮ್ಮ ವಿಮೋಚನೆಗೆ ಯಾವ ದೇವರುಗಳು ಬಂದಿರಲಿಲ್ಲ. ದಲಿತ ಸಮುದಾಯ ಸಾರ್ವಜನಿಕ ಸ್ಥಳಗಳಲ್ಲಿ ನೀರು ಕುಡಿಯಲು ಯಾವ ದೇವರುಗಳು ಅವಕಾಶ ಕೊಡಿಸಲಿಲ್ಲ. ಅದಕ್ಕೂ ನಮ್ಮ ದೇವರು ಬಾಬಾ ಸಾಹೇಬ್ ಅಂಬೇಡ್ಕರ್ ಬರಬೇಕಾಯಿತು. ಇದನ್ನು ನೀವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಹಿರಿಯ ದಲಿತ ಹೋರಾಟಗಾರ ಎಂ.ವೆಂಕಟ ಸ್ವಾಮಿ ಮಾತನಾಡಿ, ದೇವರ ಹೊಸ ಹಳ್ಳಿಯ ಕಾರ್ಯಕ್ರಮದಿಂದ ಅಂಬೇಡ್ಕರ್ ಹಬ್ಬದ ಗೌರವ ಹೆಚ್ಚಾಗಿದೆ. ಅಂಬೇಡ್ಕರ್ ಕೇವಲ ನಮ್ಮೂರಿಗೆ ಬೇಕಾದವರಲ್ಲ. ಅವರು ಇಡೀ ಜಗತ್ತಿಗೆ ಬೇಕಾದವರು. ಡಾ. ಬಿ.ಆರ್. ಅಂಬೇಡ್ಕರ್ ಜಗತ್ತಿನ ಶ್ರೇಷ್ಠ ಬುದ್ದಿಜೀವಿ ಎಂದು ಕೊಲಂಬಿಯಾ ಯೂನಿವರ್ಸಿಟಿ ತನ್ನ ಸಮೀಕ್ಷೆಯ ಮೂಲಕ ಹೇಳಿದೆ. BBC ವಾಹಿನಿ ನಡೆಸಿದ ಸಮೀಕ್ಷೆಯಲ್ಲಿ ದೇಶದ ಮಹಾನಾಯಕ ಎಂದು ಪಟ್ಟಿ ಮಾಡಿದೆ.
ವಿಶ್ವಸಂಸ್ಥೆ ಅಂಬೇಡ್ಕರ್ ದಿನಾಚರಣೆಯನ್ನು ವಿಶ್ವಜ್ಞಾನ ದಿನ ಎಂದು ಘೋಷಣೆ ಮಾಡಿದೆ. ಇಷ್ಟೆಲ್ಲ ಗೌರವ ಹೊಂದಿದ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಭಾಗ್ಯ ಎಂದು ತಿಳಿಸಿದರು.

ಸಮಾನತೆ ಪಡೆಯುವುದು ಮಾತ್ರವೇ ಅಂಬೇಡ್ಕರ್ ಅವರ ಕನಸಾಗಿರಲಿಲ್ಲ. ಬಹುಜನರು ರಾಜಕೀಯ ಅಧಿಕಾರ ಪಡೆಯಬೇಕು ಎಂಬುದು ಅವರ ಕನಸಾಗಿತ್ತು. ಸಮಸಮಾಜ ನಿರ್ಮಾಣದ ಜತೆಗೆ, ರಾಜಕೀಯ ಶಕ್ತಿಯನ್ನು ಪಡೆಯುವ ನಿಟ್ಟಿನಲ್ಲಿ ನಾವೆಲ್ಲರೂ ಸಂಘಟಿತರಾಗಬೇಕು.
ಚೇತನ್ ಅಹಿಂಸಾ, ಸಾಮಾಜಿಕ ಹೋರಾಟಗಾರ


Share It

You cannot copy content of this page