ಬಳ್ಳಾರಿ ಜೈಲಿಗೆ ಆಅಗಮಿಸಿದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಕಾನೂನು ಹೋರಾಟದ ಚರ್ಚೆ
![IMG-20240612-WA0030](https://whitepaperkannada.com/wp-content/uploads/2024/06/IMG-20240612-WA0030-1.jpg)
ಬಳ್ಳಾರಿ: ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಶಿಫ್ಟ್ ಆಗಿರುವ ಕೊಲೆ ಆರೋಪಿ ನಟ ದರ್ಶನ್ ನೋಡಲು ಅವರ ಪತ್ನಿ ವಿಜಯಲಕ್ಷ್ಮಿ ವಕೀಲರ ತಂಡದ ಜತೆ ಆಗಮಿಸಿದ್ದರು.
ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿದ ಮೂರು ದಿನದ ಬಳಿಕ ಹೊಸ ಬಟ್ಟೆ, ಡ್ರೈ ಫ್ರೂಟ್ಸ್, ಬ್ರೆಷ್, ಪೇಸ್ಟ್, ಔಷಧಿ, ಇಟ್ಟುಕೊಂಡಿರುವ ಎರಡು ಬ್ಯಾಗ್ ಜೊತೆಗೆ ವಿಜಯಲಕ್ಷ್ಮಿ ಅವರು ಭೇಟಿ ನೀಡಿದರು. ಸೆಕ್ಯೂರಿಟಿ ರೂಂನಲ್ಲಿ ಬ್ಯಾಗ್ ಪರಿಶೀಲನೆ ಬಳಿಕ ದರ್ಶನ್ ಕೊಠಡಿಯತ್ತ ಅವರು ತೆರಳಿದರು.
ಹೈಸೆಕ್ಯೂರಿಟಿ ಸೆಲ್ಗೆ ವಿಸಿಟರ್ ಗೆ ಪ್ರವೇಶವಿಲ್ಲದ ಕಾರಣ ವಿಜಿಟರ್ ಸೆಲ್ನಲ್ಲಿ ಭೇಟಿಗೆ ಅವಕಾಶ ನೀಡಲಾಗಿದ್ದು, ಅಲ್ಲಿಯೇ ದರ್ಶನ್ ಭೇಟಿ ಮಾಡಿ ಮಾತನಾಡಿಸಿದರು ಎನ್ನಲಾಗಿದೆ. ಪತಿಯ ಆರೋಗ್ಯ ವಿಚಾರಿಸಿದ ವಿಜಯಲಕ್ಷ್ಮಿ, ಕಾನೂನು ಹೋರಾಟದ ಬಗ್ಗೆ ಚರ್ಚೆ ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಅವರು ವಕೀಲರ ಜೊತೆ ಆಗಮಿಸಿದ್ದರು ಎನ್ನಲಾಗಿದೆ.