ಬೆಂಗಳೂರು: ಲಘು ಉದ್ಯೋಗ ಭಾರತಿ (NGO) ಬೆಂಗಳೂರು ಉತ್ತರ ಆಯೋಜಿಸುತ್ತಿದೆ “ಸರ್ಫೇಸ್ ಎಕ್ಸ್ಪೋ 2024” ಮೇಲ್ಮೈ ಚಿಕಿತ್ಸೆ, ಲೇಪನ ತಂತ್ರಜ್ಞಾನಗಳು ಮತ್ತು ಸಂಬಂಧಿತ ಉದ್ಯಮಗಳಿಗೆ ಸಮರ್ಪಿತ ಈ ಪ್ರಾರಂಭಿಕ (FIRST EDITION) ಕಾರ್ಯಕ್ರಮ 2024ರ ಸೆಪ್ಟೆಂಬರ್ 26-28 ರಂದು, ಗ್ರ್ಯಾಂಡ್ ಕ್ಯಾಸಲ್ ಗೇಟ್ ನಂ.6, ಪ್ಯಾಲೆಸ್ ಗ್ರೌಂಡ್ಸ್, ಬೆಂಗಳೂರಿನಲ್ಲಿ ನಡೆಯಲಿದೆ.
ದೇಶದ ಉದ್ದಗಲದಿಂದ ಉದ್ಯಮ ನಾಯಕರು, ನಾವೀನ್ಯತಾವಾದಿಗಳು, ತಜ್ಞರನ್ನು ಒಟ್ಟುಗೂಡಿಸುವ ಮತ್ತು ಮೇಲ್ಮೈ ಲೇಪನ ಕ್ಷೇತ್ರದಲ್ಲಿ ಅತ್ಯಾಧುನಿಕ ಪ್ರಗತಿಗಳನ್ನು ಉತ್ತೇಜಿಸುವ ಮುಖ್ಯ ವೇದಿಕೆ ಎಂಬುದು ಈ ಪ್ರದರ್ಶನದ ಉದ್ದೇಶವಾಗಿದೆ.
ಈ ಕಾರ್ಯಕ್ರಮವನ್ನು ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಖಾತೆ ಸಚಿವೆ ಮಾನ್ಯ ಸುಶ್ರೀ ಶೋಭಾ ಕರಂದ್ಲಾಜೆ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರ ಉಪಸ್ಥಿತಿ, ಭಾರತ ಉದ್ಯಮ ಮತ್ತು ಆರ್ಥಿಕ ವಲಯದಲ್ಲಿ ಈ ಕ್ಷೇತ್ರದ ಮಹತ್ವವನ್ನು ಸಾರಿ ಹೇಳಲಿದೆ.
ಲಘು ಉದ್ಯೋಗ ಭಾರತಿ ಬೆಂಗಳೂರು ಉತ್ತರದ ಅಧ್ಯಕ್ಷ ಶ್ರೀ ಸಂಜಯ್ ಪಿ. ಭಟ್ ಅವರು ಈ ಐತಿಹಾಸಿಕ ಕಾರ್ಯಕ್ರಮದ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಾ, “ಸರ್ಫೇಕ್ಸ್ಪೊ 2024, ಮೇಲ್ಮೈ ಲೇಪನ ಉದ್ಯಮದ ತಜ್ಞರಿಗಾಗಿ ಪ್ರಮುಖ ವೇದಿಕೆಯಾಗಿ ರೂಪುಗೊಳ್ಳಲಿದೆ.
ಇದು ತಂತ್ರಜ್ಞಾನಗಳು ಮತ್ತು ಉತ್ಪನ್ನಗಳನ್ನು ಮಾತ್ರ ಪ್ರದರ್ಶಿಸದೆ, ವೇಗವಾಗಿ ವಿಕಸಿಸುತ್ತಿರುವ ಉದ್ಯಮದಲ್ಲಿ ಜಾಲಾತ್ಮಕತೆ, ಸಹಕಾರ ಮತ್ತು ಬೆಳವಣಿಗೆಗೆ ಅವಕಾಶಗಳನ್ನು ಸೃಷ್ಟಿಸುತ್ತದೆ” ಎಂದಿದ್ದಾರೆ.
ಈ ಪ್ರಾರಂಭಿಕ ಕಾರ್ಯಕ್ರಮ (ಫಸ್ಟ್ ಎಡಿಷನ್) ಸರ್ಫೇಸ್ ಎಕ್ಸ್ಪೋ 2024 100 ಕ್ಕೂ ಹೆಚ್ಚು ಪ್ರದರ್ಶಕರನ್ನು ಒಳಗೊಂಡಿರಲಿದೆ. ಮೇಲ್ಮೈ ಚಿಕಿತ್ಸೆ ರಾಸಾಯನಿಕಗಳು, ಪೌಡರ್ ಕೋಟಿಂಗ್, ಪೇಂಟಿಂಗ್, ಅಂಟು ವಸ್ತುಗಳು, ತೈಲ ವಿಭಜಕಗಳು ಮತ್ತು ಇನ್ನಷ್ಟು ಉತ್ಪನ್ನ ಗಳನ್ನು ಪ್ರದಶಿಸಲಿವೆ.
ಅತ್ಯಾಧುನಿಕ ತಂತ್ರಜ್ಞಾನಗಳ ಮೇಲೆ ಒತ್ತಾಸೆಯುಳ್ಳ ಈ ಕಾರ್ಯಕ್ರಮವು ವಾಹನ ಉದ್ಯಮ, ವೈಮಾನಿಕ, ನಿರ್ಮಾಣ, ಎಲೆಕ್ಟ್ರಾನಿಕ್ಸ್, ಪ್ಯಾಕೇಜಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸೇವೆಯನ್ನು ಪಸರಿಸಲಿದೆ.
ಎಕ್ಸ್ಪೋ ಗೆ ಬರುವ ಸಂದರ್ಶಕರು ಹಾಗು ಪ್ರದರ್ಶಕರು ಈ ಕೆಳಗಿನವುಗಳನ್ನು ನಿರೀಕ್ಷಿಸಬಹುದು
- ಸಂವಹನಾತ್ಮಕ ಪ್ರದರ್ಶನಗಳು
- ಜಾಲಾತ್ಮಕ ಅವಕಾಶಗಳು
- ಮೇಲ್ಮೈ ಲೇಪನದ ಇತ್ತೀಚಿನ ಪ್ರವೃತ್ತಿಗಳ ಕುರಿತ 8 ಮಹತ್ವದ ಕಾರ್ಯಾಗಾರಗಳು
- ಮೇಲ್ಮೈ ಚಿಕಿತ್ಸಾ ತಂತ್ರಜ್ಞಾನಗಳಲ್ಲಿ ನಾವೀನ್ಯತೆಗಳು

