ಅಪರಾಧ ಸುದ್ದಿ

ಹಿಂದೂ ಕರ್ಯಕರ್ತರ ಮೇಲೆ ಹಲ್ಲೆ: ಜುಲೈ 3 ರಂದು ಹುಕ್ಕೇರಿ ಬಂದ್ ?

Share It

ಬೆಳಗಾವಿ : ಗೋವಧೆಗೆ ವಿರುದ್ಧವಾಗಿ ಗೋ ರಕ್ಷಣೆಗೆ ಮುಂದಾದ ವೇಳೆ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 3 ರಂದು ಹುಕ್ಕೇರಿ ಬಂದ್ ಮಾಡುವ ಎಚ್ಚರಿಕೆ ನೀಡಲಾಗಿದೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಚಲೋ ಇಂಗಳಗಿ ಎಂಬ ಪ್ರತಿಭಟನಾತ್ಮಕ ರ್ಯಾಲಿಗೆ ಕರೆ ನೀಡಲಾಗಿದೆ.

ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ, ಗಂಗಾಧರ ಕುಲಕರ್ಣಿ, ಈ ಸಂಬಂಧ ಮಾತನಾಡಿ, ಕಾರ್ಯಕರ್ತರ ರಕ್ಷಣೆಯಲ್ಲಿ ವಿಫಲವಾದ ರಾಜ್ಯ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆಯ ವಿರುದ್ಧ ಕಠಿಣ ಕ್ರಮಕ್ಕೆ ಕೈಗೊಳ್ಳಬೇಕು. ಇಲ್ಲದಿದ್ದರೆ ಜುಲೈ 3ರಂದು ಹುಕ್ಕೇರಿಯಲ್ಲಿ ಬಂದ್ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಹಲ್ಲೆಯ ಘಟನೆ ಹಿಂದೂ ಕಾರ್ಯಕರ್ತರಲ್ಲಿ ತೀವ್ರ ವಿಕೋಪ ಮೂಡಿಸಿದ್ದು, ಶ್ರೀರಾಮ ಸೇನೆಯ ಮುಖಂಡರು ರಾಜ್ಯ ಸರ್ಕಾರ ಹಾಗೂ ಪೊಲೀಸರ ನಿರ್ಲಕ್ಷ್ಯವನ್ನು ತೀವ್ರವಾಗಿ ಟೀಕಿಸಿದ್ದಾರೆ.


Share It

You cannot copy content of this page