ಆರೋಗ್ಯ ಸುದ್ದಿ

ಸಾವಿನಲ್ಲೂ ಸಾರ್ಥಕತೆ ಮೆರೆದ ಮಂಡ್ಯದ ಯುವಕ: ಅಂಗಾಂಗ ಕಸಿಯಿಂದ ಆರು ಮಂದಿಗೆ ಜೀವದಾನ

Share It

ಬೆಂಗಳೂರು: ವಿಕ್ಟೋರಿಯಾದ ಟ್ರಾಮಾ ಕೇರ್ ಸೆಂಟರ್‌ಗೆ ದಾಖಲಾಗಿದ್ದ ಯುವಕನ ಅಂಗಾಂಗ ದಾನಕ್ಕೆ ಕುಟುಂಬಸ್ಥರು ಸಮ್ಮತಿಸಿದ್ದರಿಂದ, ಆರು ಮಂದಿಗೆ ಅಂಗಾಂಗ ಕಸಿ ಸಾಧ್ಯವಾಗಿದೆ.

ಮಂಡ್ಯ ಜಿಲ್ಲೆಯ ದರ್ಶನ್ ಎಂಬವರು ಫೆಬ್ರುವರಿ 22 ರಂದು ದ್ವಿಚಕ್ರ ವಾಹನದಿಂದ ಬಿದ್ದು ಗಾಯಗೊಂಡಿದ್ದರು. ಅವರನ್ನು ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ತಲೆಯೊಳಗೆ ರಕ್ತಸ್ರಾವ ಆಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾದ ಟ್ರಾಮಾ ಕೇರ್ ಸೆಂಟರ್‌ಗೆ ಶಿಫಾರಸು ಮಾಡಲಾಗಿತ್ತು.

ಟ್ರಾಮಾ ಕೇರ್ ಸೆಂಟರ್‌ಗೆ ದಾಖಲಾದ ಯುವಕನಿಗೆ ವೈದ್ಯರ ತಂಡವು ವಿವಿಧ ಪರೀಕ್ಷೆಗಳನ್ನು ನಡೆಸಿ, ಚಿಕಿತ್ಸೆ ಒದಗಿಸಿದರೂ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿರಲಿಲ್ಲ. ಎರಡು ದಿನಗಳ ಬಳಿಕ ಯುವಕನ ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರ ತಂಡ ತಿಳಿಸಿತ್ತು.

ಯುವಕನ ಕುಟುಂಬಸ್ಥರಿಗೆ ಅಂಗಾಂಗ ದಾನದ ಮಹತ್ವ ಬಗ್ಗೆ ತಿಳಿಸಿದ ವೈದ್ಯರು, ಅವರಿಂದ ಅನುಮತಿ ಪಡೆದುಕೊಂಡರು. ಇದರಿಂದಾಗಿ ಆರು ಮಂದಿಗೆ ಅಂಗಾಂಗ ಕಸಿ ಮಾಡಲಾಗಿದೆ. ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ ಆರಿ ಜನರಿಗೆ ಜೀವದಾನ ಮಾಡೊದ್ದಾರೆ.


Share It

You cannot copy content of this page