ರಾಜಕೀಯ ಸುದ್ದಿ

ಸರಕಾರಿ ಸ್ಥಳಗಳಲ್ಲಿ RSS ಚಟುವಟಿಕೆ ಬ್ಯಾನ್: ಸಿಎಂಗೆ ಸಚಿಚ ಪ್ರಿಯಾಂಕ್ ಖರ್ಗೆ ಪತ್ರ

Share It

ಬೆಂಗಳೂರು: ಒಂದೆಡೆ RSS ನೂರು ವರ್ಣ ತುಂಬಿಸಿದ ಖುಷಿಯಲ್ಲಿದ್ದರೆ, ಮತ್ತೊಂದೆಡೆ ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳಿಗೆ ಕಡಿವಾಣ ಹಾಕಲು ರಾಜ್ಯ ಸರಕಾರ ಮುಂದಾಗಿದೆ.

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಸಾರ್ವಜನಿಕ ಸ್ಥಳಗಳಲ್ಲಿ RSSನ ಕಾರ್ಯಚಟುವಟಿಕೆ ನಿಷೇಧಿಸುವಂತೆ ಮನವಿ ಮಾಡಿದ್ದಾರೆ. ಈ ಮನವಿಗೆ ಸ್ಪಂದಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಈ ಕುರಿತು ಸೂಕ್ತ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಹಾಗು ಸರಕಾರಿ ಮೈದಾನಗಳನ್ನು ಬಳಸಿಕೊಂಡು ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಶಾಲೆಗಳು, ಮುರಾರ್ಜಿ ಶಾಲೆಗಳು, ಮುಜರಾಯಿ ದೇವಸ್ಥಾನಗಳು ಸೇರಿ ವಿವಿಧ ಸ್ಥಳಗಳಲ್ಲಿ ಮೌಢ್ಯ ಬಿತ್ತುವ ಕೆಲಸ ಮಾಡಬಾರದು. ಅನಿಮತಿಯಿಲ್ಲದೆ ದೊಣ್ಣೆ ಹಿಡಿದು ಪಥಸಂಚಲನ ನಡೆಸುವುದು ಸಮಾಜದಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ ಬರೆದಿದ್ದರು.

ಪ್ರಿಯಾಂಕ್ ಖರ್ಗೆ RSS ಸಿದ್ಧಾಂತವನ್ನು ಬಹಳ ಕಟುವಾಗಿಯೇ ಟೀಕಿಸುತ್ತಾ ಬಂದಿದ್ದು, RSS ಗಾಳಿ ಕೂಡ ದಲಿತರ ಮೇಲೆ ಸೋಕಬಾರದು. ಸಂವಿಧಾನ ವಿರೋಧಿ ಮನಸ್ಥಿತಿ ಮತ್ತು ಮನುವಾದಿಗಳು ಹಿಂದುಳಿದ ಸಮುದಾಯಗಳಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಬಹುದೊಡ್ಡ ಅಪಾಯ ಎಂದು ಹೇಳಿಕೆ ನೀಡಿದ್ದರು. ಇದೀಗ ಇಂತಹದ್ದೊಂದು ಪತ್ರ ಬರೆಯುವ ಮೂಲಕ ಚರ್ಚೆ ಹುಟ್ಟುಹಾಕಿದ್ದಾರೆ.


Share It

You cannot copy content of this page