ರಾಜಕೀಯ ಸುದ್ದಿ

2026 ಕ್ಕೆ ರಾಯದುರ್ಗ- ತುಮಕೂರು ರೈಲ್ವೆ ಯೋಜನೆ ಪೂರ್ಣ: ಸೋಮಣ್ಣ ಭರವಸೆ

Share It

ತುಮಕೂರು : ರಾಯದುರ್ಗ ತುಮಕೂರು ರೈಲ್ವೆ ಯೋಜನೆಯನ್ನು 2026 ಕ್ಕೆ ಪೂರ್ಣಗೊಳಿಸಿ ನರೇಂದ್ರ ಮೋದಿ ಅವರಿಂದ ಉದ್ಘಾಟಿಸುತ್ತೇನೆ ಎಂದು ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ಈ ಸೋಮಣ್ಣ ಹೇಳಿದರು.

ನಗರದಲ್ಲಿ ನಡೆದ ಬಿಜೆಪಿ ಜೆಡಿಎಸ್ ಮೈತ್ರಿ ಯಲ್ಲಿ ಈ ಸೋಮಣ್ಣನವರಿಗೆ ಆಯೋಜಿಸಿದ್ದ ಅಭಿನಂದನಾ ಮತ್ತು ಗೆಲುವಿಗೆ ಸಹಕರಿಸಿದ ಕಾರ್ಯಕರ್ತರಿಗೆ ಕೃತಜ್ಞತ ಸಮಾರಂಭದಲ್ಲಿ ಮಾತನಾದ ಅವರು, ಈ ಕುರಿತು ಜಿಲ್ಲಾಧಿಕಾರಿ ಹಾಗೂ ರೈಲ್ವೆ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚೆ ನಡೆಸಿದ್ದೇನೆ. ಬಾಕಿ ಇರುವ 11 ಎಕರೆ ಪ್ರದೇಶವನ್ನು ಆದಷ್ಟು ಬೇಗ ಸ್ವಾಧೀನ ಪಡಿಸಿಕೊಳ್ಳಲಾಗುವುದು ಎಂದರು. ತುಮಕೂರಿನ ರೈಲು ನಿಲ್ದಾಣವನ್ನು ಉನ್ನತಿಕರಿಸಲು ಯೋಚಿಸಿದ್ದೇನೆ. ಜೊತೆಗೆ ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿ ಎತ್ತಿನಹೊಳೆ ಹಣವನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು. ಹೇಮಾವತಿ ಕೆನೆಲ್ ಲಿಂಕ್ ಯೋಜನೆಯನ್ನು ಕೈ ಬಿಡಲು ಗೃಹ ಸಚಿವರೊಂದಿಗೆ ಚರ್ಚಿಸಿದ್ದೇನೆ ಎಂದು ಹೇಳಿದರು.

ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಕೇಂದ್ರ ಸಚಿವನಾಗಿದ್ದೇನೆ. ನೀವು ನಂಬಿಕೆಯನ್ನು ಹುಸಿ ಮಾಡುವುದಿಲ್ಲ. ತುಮಕೂರಿನ ಎಲ್ಲಾ ಮತದಾರರಿಗೆ ನಾನು ಕೃತಜ್ಞನಾಗಿರುತ್ತೇನೆ ಎಂದರು.

ತುಮಕೂರು ಗ್ರಾಮಾಂತರ ಶಾಸಕ ಬಿ ಸುರೇಶ್ ಗೌಡ ಮಾಚನಾಡಿ, ಸೋಮಣ್ಣನವರು ರಾಜ್ಯದ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದೆ. ಇಬ್ಬರು ಶಾಸಕರಿದ್ದರು ಜಿಲ್ಲೆಗೆ ಹಣ ಬಂದಿಲ್ಲ. ಇದನ್ನೆಲ್ಲ ಸೋಮಣ್ಣನವರು ಇದನ್ನೆಲ್ಲ ಸೋಮಣ್ಣನವರು ಸರಿಪಡಿಸುತ್ತಾರೆ ಎಂದರು.


Share It

You cannot copy content of this page