ಮೈಸೂರು-ಬೆಂಗಳೂರು ಹೈವೆಯಲ್ಲಿ ಕಾರಿಗೆ ಬೆಂಕಿ: ಮಗುವಿವೊಂದಿಗೆ ದಂಪತಿ ಬಚಾವ್
ಬೆಂಗಳೂರು: ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಹೈವೆಯಲ್ಲಿ ಕಾರಿಗೆ ಏಕಾಏಕಿ ಬೆಂಕಿ ತಗುಲಿದ್ದು ಹೊತ್ತಿ ಉರಿದಿದೆ.
ಮೈಸೂರಿನ ಮನೋಹರ್ ಎಂಬುವವರಿಗೆ ಸೇರಿದ ಕಾರು ಇದಾಗಿದ್ದು, ದಂಪತಿ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದರು. ಮದ್ದೂರು ಸಮೀಪದ ಹೈವೆಯಲ್ಲಿ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ.
ಈ ವೇಳೆ ಕಾರು ನಿಲ್ಲಿಸಿದ ಮನೋಹರ್ ಮಗುವಿನೊಂದಿಗೆ ಕಾರಿನಿಂದ ಕೆಳಗಿಳಿದು ಓಡಿಬಂದಿದ್ದಾರೆ. ಹೀಗಾಗಿ, ದಂಪತಿ ಅನಾಹುತದಿಂದ ಪಾರಾಗಿದ್ದಾರೆ. ಮದ್ದೂರು ಸಂಚಾರಿ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ಮುಂದಿನ ವಿಚಾರಣೆ ನಡೆಸಿದ್ದಾರೆ.


