ಡ್ರಗ್ಸ್ ನಿಯಂತ್ರಣಕ್ಕೆ ಕಲಬುರಗಿಯಲ್ಲಿ ಫೈಲೆಟ್ ಪ್ರಾಜೆಕ್ಟ್ ಆರಂಭ

Share It

ಕಲಬುರಗಿ: ರಾಜ್ಯದಲ್ಲಿ ಡ್ರಗ್ಸ್ ದಂಧೆ ನಿಯಂತ್ರಣಕ್ಕೆ ಮುಂದಾಗಿರುವ ಪೊಲೀಸ್ ಇಲಾಖೆ, ಕಲಬುರಗಿಯಲ್ಲಿ ಪೈಲೆಟ್ ಯೋಜನೆ ಆರಂಭಿಸಲಾಗಿದೆ.

ಇಂದು ಗೃಹಸಚಿವ ಡಾ. ಜಿ ಪರಮೇಶ್ವರ್ ಯೋಜನೆಯನ್ನು ಉದ್ಘಾಟನೆ ಮಾಡಿದ್ದು, ಅನಂತರ ಮಾತನಾಡಿ, ಡ್ರಗ್ಸ್ ಮುಕ್ತ ರಾಜ್ಯ ಮಾಡುವುದು ನಮ್ಮ ಗುರಿ. ಕಲಬುರಗಿ ಕಮೀಷನರೇಟ್ ವ್ಯಾಪ್ತಿಯಲ್ಲಿ ೧೧೫ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಎಲ್ಲ ಪೊಲೀಸ್ ಠಾಣೆಯ ನಿಗಾವನ್ನು ಒಂದೇ ಕಡೆಯಿಂದ ಮಾಡಲಾಗುತ್ತದೆ ಎಂದರು.

ಡ್ರಗ್ಸ್ ನಿಯಂತ್ರಣಕ್ಕೆ ಪೊಲೀಸರು ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಡ್ರಗ್ಸ್ ಮುಕ್ತ ರಾಜ್ಯ ಮಾಡುವುದು ನಮ್ಮ ಗುರಿ. ಇದಕ್ಕಾಗಿ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಕಲಬುರಗಿ ಮಾದರಿಯಲ್ಲಿ ಬೆಂಗಳೂರಿಗೆ ವಿಸ್ತರಣೆ ಮಾಡುವ ಗುರಿ ನಮ್ಮದು, ಮುಂದಿನ ದಿನಗಳಲ್ಲಿ ಅದು ಸಾಕಾರವಾಗುತ್ತದೆ ಎಂದು ತಿಳಿಸಿದದರು.


Share It

You May Have Missed

You cannot copy content of this page