ಮಂಗಳೂರು: ಮೂಡಾ ಹಗರಣದ ವಿಚಾರದಲ್ಲಿ ಇದೀಗ ಕೇಳಿಬರುತ್ತಿರುವ ವಾಮಾಚಾರದ ಬೆಳವಣಿಗೆಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತರಿಗೆ ಮೂಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಲಿಖಿತ ದೂರು ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬರ್ಕೆ ಪೊಲೀಸ್ ಠಾಣೆಯಲ್ಲಿ ವಾಮಾಚಾರ ನಡೆದಿರುವ ಸಂಬಂಧ 13/2025 ಸಂಖ್ಯೆಯಲ್ಲಿ ಪ್ರಕರಣ ದಾಖಲಾಗಿದೆ. ನನಗೆ ಇರುವ ಅನುಭವದ ಪ್ರಕಾರ ಇದು ದೂರುದಾರರಾದ ನಮಗೆ ಬಲ ತುಂಬಲು ನಡೆದಿರುವ ಕೃತ್ಯವಲ್ಲ, ಬದಲಿಗೆ ಸಿಎಂ ಪತ್ನಿಗೆ ಅನುಕೂಲವಾಗುವಂತೆ ನಡೆದುಕೊಳ್ಳಲು ಹೀಗೆ ಮಾಡಿರಬಹುದು ಎಂದು ಅವರು ಆರೋಪಿಸಿದ್ದಾರೆ.
ನಾವು ಹೋರಾಟದಿಂದ ಹಿಂದೆ ಸರಿಯುವಂತೆ ಮಾಡಲು ಮಾಡಿರಬಹುದು. ಹೈಕೋರ್ಟ್ನಲ್ಲಿರುವ ರಿಟ್ ಅರ್ಜಿ ವಾಪಸ್ ಪಡೆಯಬೇಕು ಎಂಬುದು ಅವರ ಉದ್ದೇಶ. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನೀಡುತ್ತೇನೆ. ತಾವುಗಳು ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಕಂಡುಹಿಡಿಯಬೇಕು ಎಂದು ಅವರು ಮನವಿ ಮಾಡಿದ್ದಾರೆ.