ಆಗ್ರಾ: ಅತ್ತಿಗೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲು ಆಕೆಯ ಬಾಮೈದುನನೇ ಬ್ಯಾಂಕ್‌ನಿAದ ಸಾಲ ಪಡೆದು ಸುಫಾರಿ ಕೊಟ್ಟಿದ್ದ ಪ್ರಕರಣ ಮುಜಾಫರ್ ನಗರದ ವ್ಯಾಪ್ತಿಯಲ್ಲಿ ನಡೆದಿದೆ.
21 ವರ್ಷದ ಮಹಿಳೆಯೊಬ್ಬರು ಜನವರಿ 21 ರಂದು ನಾಪತ್ತೆಯಾಗಿದ್ದು, ಸಮೀಪದ ಅರಣ್ಯ ಪ್ರದೇಶದಲ್ಲಿ ಆಕೆಯ ಶವ ಸುಟ್ಟುಕರಕಲಾದ ರೀತಿಯಲ್ಲಿ ಪತ್ತೆಯಾಗಿತ್ತು. ಶವದ ಮೇಲಿದ್ದ ವಸ್ತುಗಳ ಮೂಲಕ ಆಕೆಯನ್ನು ಗುರುತಿಸಿದ್ದಾರೆ.
ಪ್ರಕರಣದ ಸಂಬAಧ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಮೀರತ್ ನಿವಾಸಿ, ಮೃತಳ ಸೋದರ ಮಾವನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತಾನೇ ಆಕೆಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ನಡೆಸಲು ಸುಫಾರಿ ಕೊಟ್ಟಿದ್ದಾಗಿ ಒಪ್ಪಿಕೊಂಡಿದ್ದಾನೆ.
ಅತ್ಯಾಚಾರ ನಡೆಸಿದ್ದ ಮತ್ತಿಬ್ಬರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಆರೋಫಿ ಮಹಿಳೆ ಜತೆಗೆ ಅಕ್ರಮ ಸಂಬAಧ ಹೊಂದಿದ್ದು, ಆಕೆ ಕೆಲ ಖಾಸಗಿ ಪೋಟೋ ಮತ್ತು ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಕಾರಣಕ್ಕೆ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಸAಚು ಪೂರ್ಣಗೊಳಿಸಲು ಮತ್ತಿಬ್ಬರ ಸಹಾಯ ಪಡೆದಿದ್ದು, ಬ್ಯಾಂಕ್‌ನಿAದ 40 ಸಾವಿರ ರು. ಸಾಲ ಪಡೆದಿದ್ದ ಎನ್ನಲಾಗಿದೆ. ಅದರಲ್ಲಿ ಮತ್ತಿಬ್ಬರು ಆರೋಪಿಗಳಿಗೆ 10 ಸಾವಿರ ಅಡ್ವಾನ್ಸ್ ಕೊಟ್ಟಿದ್ದು, ಉಳಿಕೆ 20 ಸಾವಿರ ರು. ಹಣವನ್ನು ಕೃತ್ಯದ ನಂತರ ಕೊಡುವುದಾಗಿ ಹೇಳಿದ್ದ ಎನ್ನಲಾಗಿದೆ.
ಮೊದಲಿಗೆ ಆಕೆಯನ್ನು ತನ್ನ ಬೈಕ್‌ನಲ್ಲಿಯೇ ಕರೆದುಕೊಂಡು ಹೋದ ಆರೋಪಿ, ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ಕೊಲೆ ಮಾಡಿದ್ದಾರೆ. ಅನಂತರ ಸಾಕ್ಷಿ ನಾಶಪಡಿಸಲು ಆಕೆಯ ದೇಹವನ್ನು ಪೆಟ್ರೋಲ್ ಹಾಕಿ ಸುಟ್ಟುಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.