ಬೀದರ್: ತಾಯಿ ಮಾಡಿದ್ದ ಸಾಲ ತೀರಿಸಲು ಹೆದರಿದ ಮಗನೊಬ್ಬ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಜಿಟಗುಪ್ಪ ತಾಲೂಕಿನಲ್ಲಿ ನಡೆದಿದೆ.
ಚಿಟಗುಪ್ಪ ತಾಲೂಕಿನ ರಾಯಪುರ ಗ್ರಾಮದ ಗಣೇಶ್ ಎಂಬ ೨೫ ವರ್ಷದ ಯುವಕ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ತಾಯಿ ಎಸ್‌ಬಿಐ ಬ್ಯಾಂಕ್‌ನಲ್ಲಿ 5 ಲಕ್ಷ ಸಾಲ ಮಾಡಿದ್ದರು. ಅದನ್ನು ತೀರಸಲು ಆಗದೆ ಕೊರಗುತ್ತಿದ್ದರು.
ನಿತ್ಯವೂ ತಾಯಿಯ ಕೊರಗನ್ನು ನೋಡುತ್ತಿದ್ದ ಮಗ ಸಾಲ ತೀರಿಸಲು ಅನೇಕ ಕೆಲಸಗಳನ್ನು ಮಾಡಲು ಮುಂದಾಗಿದ್ದ. ಯಾವುದೇ ಕೆಲಸ ಕೈಹಿಡಿಯದ ಕಾರಣಕ್ಕೆ ಹತಾಶನಾಗಿದ್ದ. ಇದೀಗ ನಿತ್ಯವೂ ಕೊರಗುತ್ತಿದ್ದ ತಾಯಿ ನೋವು ನೋಡಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.