ಬೆಂಗಳೂರು: ಏರ್‌ಪೋರ್ಟ್ ಟ್ಯಾಕ್ಸಿಯಲ್ಲಿ ಮಾತು ಬರದ ಚಾಲನಕನೊಬ್ಬ ನೀಡುವ ಟ್ಯಾಕ್ಸಿ ಸೇವೆ ನೆಟ್ಟಿಗರ ಮನಗೆದ್ದಿದ್ದು, ಇಟರ್ನೆಟ್‌ನಲ್ಲಿ ಈ ವ್ಯಕ್ತಿ ರಾತ್ರೋರಾತ್ರಿ ಟ್ರೆಂಡ್ ಆಗಿದ್ದಾರೆ.
ನಗರದಲ್ಲಿ ಏರ್‌ಪೋರ್ಟ್ ಟ್ಯಾಕ್ಸಿ ಓಡಿಸುವ ರಾಕೇಶ್ ಎಂಬ ವ್ಯಕ್ತಿವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ರಿಯಾಯಿತಿ ದರದಲ್ಲಿ ಟ್ಯಾಕ್ಸಿ ಒದಗಿಸುವ ಜತೆಗೆ ನೀರು, ನ್ಯಾಪ್ಕಿನ್‌ಗಳು ಮತ್ತು ವಿವಿಧ ಭಾಷೆಯ ಪುಸ್ತಕಗಳನ್ನು ಒದಗಿಸುತ್ತಾರೆ. ಇದು ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರ ಗಮನ ಸೆಳೆದಿದೆ.
ಈ ಟ್ಯಾಕ್ಸಿಯಲ್ಲಿ ಪ್ರಯಾಣಿಸಿದ ಪ್ರಯಾಣಿಕರೊಬ್ಬರು ರಾಕೇಶ್ ಬಗೆಗಿನ ಮಾಹಿತಿಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊAಡಿದ್ದರು. ಇದು ಕೆಲವೇ ನಿಮಿಷಗಳಲ್ಲಿ ಟ್ರೆಂಡ್ ಆಗಿದ್ದು, ಚಾಲಕನ ಸೇವೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಜಗತ್ತಿನಲ್ಲಿ ಮಾನವೀಯತೆ ಇನ್ನೂ ಅಸ್ತಿತ್ವದಲ್ಲಿದೆ ಎಂದು ತೋರಿಸುವ ನಿಜವಾದ ಹೀರೋಗಳು ಎಂಬ ಮೆಚ್ಚುಗೆಯ ಮಾತುಗಳು ಜಾಲತಾಣದಲ್ಲಿ ಪ್ರಕಟವಾಗಿದೆ. ಮೂಕನಾಗಿದ್ದರೂ ತನ್ನ ಸೇವೆಯಲ್ಲಿ ಗಮನಸೆಳೆದಿರುವ ರಾಕೇಶ್ ಪ್ರಯಾಣಿಕರ ಗಮನ ಸೆಳೆದಿದ್ದಾರೆ.