ಅಪರಾಧ ಸುದ್ದಿ

ಮೂಕಪ್ರಾಣಿಗಳಿಗೆ ವಿಷವಿಟ್ಟ ಕಿರಾತಕ: 9 ನಾಯಿಗಳು ಮೃತ

Share It

ಮುಂಬೈ: ಬೀದಿನಾಯಿಗಳಿಗೆ ವಿಷದ ಬಿಸ್ಕೇಟ್ ಇಟ್ಟು ಸಾಯಿಸುವ ಪರಯತ್ನದಲ್ಲಿ ಒಂದು ಸಾಕು ನಾಯಿಯೂ ಸೇರಿದಂತೆ ಒಟ್ಟು 9 ನಾಯಿಗಳು ಸಾವನ್ನಪ್ಪಿರುವ ಘಟನೆ ಪಹಾದ್ ಸಿಂಗ್ ಪುರ ಪ್ರದೇಶದಲ್ಲಿ ನಡೆದಿದೆ.

ಸಾಕು ನಾಯಿ ಮಾಲೀಕರು ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಆರೋಪಿಯ ಪತ್ತೆಗೆ ಬಲೆಬೀಸಿದ್ದಾರೆ. ಪ್ರಕರಣದಲ್ಲಿ ಒಂಬತ್ತು ನಾಯಿಗಳು ಸಾವನ್ನಪ್ಪಿರುವ ಕುರಿತು ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಷಾ ಘಾಟೆ ಎಂಬ 52 ವರ್ಷ ಮಹಿಳೆ, ‘ತಮ್ಮ ಲ್ಯಾಬ್ರಡಾಲ್ ನಾಯಿ ಎಂದಿನAತೆ ಹತ್ತಿರದ ಮೈದಾನಕ್ಕೆ ಹೋಗಿತ್ತು. ನಂತರ ನಾವು ವಾಕಿಂಗ್‌ಗೆ ಹೋಗುವ ವೇಳೆ ನಮ್ಮನ್ನು ಕೂಡಿಕೊಳ್ಳುತ್ತಿತ್ತು. ಆದರೆ, ಸ್ವಲ್ಪವೇ ಸಮಯದಲ್ಲಿ ಅಂದು ವಾಪಸ್ ಆಗಿದ್ದು, ಸುಸ್ತಾದಂತೆ ಕಂಡಿತು. ಜತೆಗೆ ಪದೇಪದೆ ವಾಂತಿ ಮಾಡಿಕೊಳ್ಳಲು ಆರಂಭಿಸಿತು ಎಂದು ವಿವರಿಸಿದ್ದಾರೆ.

ನಾಯಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾದೆ ಅದು ಮೃತಪಟ್ಟಿತು. ಬೀದಿನಾಯಿಗಳನ್ನು ಸಾಯಿಸಲು ಯಾರೋ ಒಬ್ಬ ವಿಷ ಹಾಕಿದ್ದಾನೆ ಎಂಬುದು ಗೊತ್ತಾಯಿತು. ಮೈದಾನದ ಬಳಿ ಹೋಗಿ ನೋಡಿದಾಗ ನಾಲ್ಕು ಮುದ್ದಾದ ಮರಿಗಳು ಸೇರಿ ಎಂಟು ನಾಯಿಗಳು ಸತ್ತುಬಿದ್ದಿದ್ದವು ಎಂದು ಆಕೆ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಘಟನೆಗೆ ಸಂಬAಧಿಸಿ ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದು, ಬೀದಿನಾಯಿಗಳಿಂದ ತೊಂದರೆಯಾದರೆ ಸ್ಥಳೀಯ ಪ್ರಾಧಿಕಾರಗಳಿಗೆ ದೂರು ನೀಡಬೇಕು. ಅದನ್ನು ಬಿಟ್ಟು ವಿಷ ಹಾಕಿ ಕೊಲ್ಲುವುದು ಅಮಾನವೀಯ. ಇಂತಹ ಘಟನೆಯನ್ನು ನಾವು ಸಹಿಸುವುದಿಲ್ಲ. ಆರೋಪಿಯನ್ನು ಬಂಧಿಸಿ, ಸೂಕ್ತ ಶಿಕ್ಷೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.


Share It

You cannot copy content of this page