ಅಪರಾಧ ರಾಜಕೀಯ ಸುದ್ದಿ

ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಸಿಐಡಿ ನೊಟೀಸ್

Share It

ಬೆಂಗಳೂರು: ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ನೊಟೀಸ್ ನೀಡಿರುವ ಸಿಐಡಿ ಪೊಲೀಸರು, ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಿ.ಟಿ ರವಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬAಧಿಸಿದAತೆ ಘಟನೆಯ ಪ್ರತ್ಯಕ್ಷ ಸಾಕ್ಷಿಯಾಗಿರುವ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸಿಐಡಿ ಪೊಲೀಸರು ನೊಟೀಸ್ ನೀಡಿದ್ದಾರೆ.

ಶುಕ್ರವಾರ ಮೂವರು ಪರಿಷತ್ ಸದಸ್ಯರಿಗೆ ನೊಟೀಸ್ ನೀಡಿರುವ ಸಿಐಡಿ ಪೊಲೀಸರು, ಯತೀಂದ್ರ ಸಿದ್ದರಾಮಯ್ಯ, ಶಿಕ್ಷಕರ ಕ್ಷೇತ್ರದ ಸದಸ್ಯ ಶ್ರೀನಿವಾಸ್ ಹಾಗೂ ಬೇಗಂ ಅವರನ್ನು ವಿಚಾರಣೆ ನಡೆಸಲಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯರಾದ ಉಮಾಶ್ರೀ, ರಾಮೋಜಿಗೌಡ, ನಾಗರಾಜ್ ಯಾದವ್ ಅವರನ್ನೂ ಕೂಡ ಸಾಕ್ಷಿಯನ್ನಾಗಿಸಿರುವ ಸಿಐಡಿ ಅವರೆಲ್ಲರಿಗೆ ನೊಟೀಸ್ ನೀಡಿದೆ. ಆದರೆ, ಶುಕ್ರವಾರ ಮೂವರನ್ನು ಮಾತ್ರ ವಿಚಾರಣೆಗೆ ಕರೆದಿದೆ.

ಸಿಐಡಿ ಪೊಲೀಸರು ಪ್ರಕರಣಕ್ಕೆ ಸಂಬಂಧ ವಿಧಾನ ಪರಿಷತ್ ಸದಸ್ಯರಿಂದ ಸೆ. 161 ರಡಿ ಹೇಳಿಕೆ ದಾಖಲು ಮಾಡಿಕೊಳ್ಳಲಿದ್ದಾರೆ. ಈ ನಡುವೆ ಸಿ.ಟಿ.ರವಿ ಅವರಿಗೂ ತನಿಖೆಗೆ ಸಹಕರಿಸುವಂತೆ ಪೊಲೀಸರು ನೊಟೀಸ್ ನೀಡಿದ್ದಾರೆ.

ಈ ನಡುವೆ ಶುಕ್ರವಾರ ಸಿ.ಟಿ. ರವಿ, ಪ್ರಕರಣದ ಸಂಬಂಧ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ. ಬೆಂಗಳೂರಿನ ೪೨ನೇ ಸಿಸಿಎಚ್ ಕೋರ್ಟ್ಗೆ ಹಾಜರಾಗಲಿರುವ ಸಿ.ಟಿ.ರವಿ ಅವರಿಗೆ ಸಿಐಡಿ ಪೊಲೀಸರು ನೊಟೀಸ್ ನೀಡಿದ್ದಾರೆ.


Share It

You cannot copy content of this page