ಚಿಕ್ಕಬಳ್ಳಾಪುರ: ಮೈಕ್ರೋ ಫೈನಾನ್ಸ್ ಸಾಲದ ಸೂಲಕ್ಕೆ ಮತ್ತೊಂದು ಬಲಿಯಾಗಿದ್ದು, ಚಿಕ್ಕಬಳ್ಳಾಪುರದಲ್ಲಿ ಗಿರೀಶ್ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾಎ.
ಈತ ಬಜಾಜ್ ಫೈನಾನ್ಸ್, ಧರ್ಮಸ್ಥಳ ಸಂಘ ಸೇರಿದಂತೆ ಅನೇಕ ಮೈಕ್ರೋ ಫಯನಾನ್ಸ್ ಸಂಸ್ಥೆಗಳಲ್ಲಿ ಸಆಲ ಮಾಡಕೊಂಡಿದ್ದರು ಎನ್ನಲಾಗಿದೆ. ಗಿರೀಶ್ ಈವರೆಗೆ ಸುಮಾರು ೧೩ ಲಕ್ಷ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸುವಂತೆ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದರೆ ಎನ್ನಲಾಗಿದೆ.
ಮನೆಯಲ್ಲೇ ನೇಣಿಗೆ ಶರಣಾಗಿದ್ದು, ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಿರೀಶ್ ಟ್ರಾö್ಯಕ್ಟರ್, ಮೊಬೈಲ್ ಸಾಲ ಸೇರಿದಂತೆ ಅನೇಕ ಸಾಲಗಳನ್ನು ಮಾಡಿಕೊಂಡಿದ್ದರು ಎನ್ನಲಾಗಿದೆ.