ಬೆಂಗಳೂರು: ಪಹಣಿಯಲ್ಲಿ ಹೆಸರು ಸೇರಿಸಲು 10 ಲಕ್ಷ ರು. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದಲ್ಲಿ ಯಲಹಂಕ ವಿಶೇಷ ತಹಸೀಲ್ದಾರ್ ಮುನಿಸ್ವಾಮಿ ರೆಡ್ಡಿ ಸೇರಿ ಮೂವರ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ಜಮೀನೊಂದರ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಪಹಣಿಯಲ್ಲಿ ಹೆಸರು ಸೇರಿಸಲು 10 ಲಕ್ಷ ರು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದಲ್ಲಿ ಯಲಹಂಕದ ತಹಸೀಲ್ದಾರ್ ಮುನಿಸ್ವಾಮಿ ರೆಡ್ಡಿ ಮತ್ತು ಮಧ್ಯವರ್ತಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು.
ಈ ವೇಳೆ ಮಧ್ಯವರ್ತಿ ಸಂದೀಪ್ ಹಾಗೂ ಯಲಹಂಕ ಪದವಿ ಪೂರ್ವ ಕಾಲೇಜು ಅತಿಥಿ ಉಪನ್ಯಾಸಕನಾಗಿರುವ ನಾಗರಾಜ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆದರೆ, ವಿಶೇಷ ತಹಸೀಲ್ದಾರ್ ಮುನಿಸ್ವಾಮಿ ರೆಡ್ಡಿ ಪರಾರಿಯಾಗಿದ್ದು, ಲೋಕಾಯುಕ್ತರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಆರೋಪಿಗಳು ಪಹಣಿಯಲ್ಲಿ ಹೆಸರು ಸೇರಿಸಲು ತಹಸೀಲ್ದಾರ್ ಪರವಾಗಿ ವಕೀಲ ಮಹೇಶ್ ಎಂಬುವವರಿAದ 10 ಲಕ್ಷ ರು. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಇದರಲ್ಲಿ 2 ಲಕ್ಷ ರು ಅಡ್ವಾನ್ಸ್ ಆಗಿ ಪಡೆಯುವ ವೇಳೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು.