ಬೆಂಗಳೂರು: ಪುಸ್ತಕ ಮೇಳದ ಹಿನ್ನೆಲೆಯಲ್ಲಿ ವಿಧಾನಸೌಧ ವೀಕ್ಷಣೆಗೆ ಸರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಿದ್ದರಿಂದ ಜನಜಂಗಲಿ ಉಂಟಾಗಿದೆ.
ಸಚಿವಾಲಯದ ವತಿಯಿಂದ ಮೂರು ದಿನಗಳಿಂದ ಪುಸ್ತಕ ಮೇಳೆ ಆಯೋಜನೆ ಮಾಡಲಾಗಿತ್ತು. ಈ ಪುಸ್ತಕ ಮೇಳ ವೀಕ್ಷಣೆಗೆ ಸರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪುಸ್ತಕ ಮೇಳದ ಅಂತಿಮ ದಿನವಾದ ಭಾನುವಾರ ವಿಧಾನಸೌಧ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ವಿಧಾನ ಮಂಡಲ ಅಧಿವೇಶನ ನಡೆಯುವ ಸ್ಥಳಕ್ಕೆ ಸರ್ವಜನಿಕರಿಗೆ ಅವಕಾಶವಿದೆ ಎಂದು ಹೇಳುತ್ತಿದ್ದಂತೆ ಸರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಅವರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸಪಟ್ಟರು.
ವೀಕೆಂಡ್ ಹಿನ್ನೆಲೆಯಲ್ಲಿ ಸರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಎಲ್ಲರಿಗೂ ವೀಕ್ಷಣೆಗೆ ಅವಕಾಶ ನೀಡಲಾಗುವುದು. ಆದರೆ, ಕೆಲವರು ಅವಸರ ಮಾಡಿದ ಕಾರಣ ಸಣ್ಣಪುಟ್ಟ ಸಮಸ್ಯೆಗಳಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.