ಹೊಸಪೇಟೆ: ಈಜಲು ನದಿಗೆ ಇಳಿದಿದ್ದ ಮೂವರು ಯುವಕರು ನೀರುಪಾಲಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಸಮೀಪ ನಡೆದಿದೆ.
ತುಂಗಾಭದ್ರಾ ನದಿ ತೀರದಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಗದಗದ ಶಿರಹಟ್ಟಿ ಮೂಲದ ಮೂವರು ಯುವಕರು ಆಂಜನೇಯದ ದರ್ಶನಲಕ್ಕೆ ಬಂದಿದ್ದರು. ಶರಣಪ್ಪ ಎಂಬ ಯುವಕನ ಹುಟ್ಟುಹಬ್ಬದ ಅಂಗವಾಗಿ ಯುವಕರ ತಂಡ ದೇವಸ್ಥಾನಕ್ಕೆ ಆಗಮಿಸಿತ್ತು.
ಈಜು ಬಾರದಿದ್ದರೂ, ಮಹೇಶ್ ಬಡಿಗೇರ ನದಿಗೆ ಇಳಿದು ಈಜಲು ಶುರು ಮಾಡಿದ್ದ. ಇದ್ದಕ್ಕಿದ್ದಂತೆ ಆತ ಕೊಚ್ಚಿಹೋಗಲು ಆರಂಭಿಸಿದ. ಈ ವೇಳೆ ಆತನ ರಕ್ಷಣೆಗೆ ಆಗಮಿಸಿದ ಶರಣಪ್ಪ ಮತ್ತು ಸಹ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.
ಮೂವರು ಯುವಕರಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಸ್ಥಳೀಯ ಮೀನುಗಾರರು ಮತ್ತು ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ. ಹೂಲಿನಹಡಗಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.