ಬೆಂಗಳೂರು: ಗ್ರೇಟರ್ ಬೆಂಗಳೂರು ಮಾಡಲು ನಮ್ಮ ಅಭ್ಯಂತರವಿಲ್ಲ, ಆದರೆ, ಅನೇಕ ಮೇಯರ್‌ಗಳು ಬೇಡ. ಒಂದೇ ಮೇಯರ್ ಇರಲಿ ಎಂದು ದಾಸರಹಳ್ಳಿ ಶಾಸಕ ಮುನಿರಾಜು ಹೇಳಿದರು.
ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಬಿಲ್ ಕುರಿತು ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಇರಲಿ, ಆಡಳಿತ ವಿಕೇಂದ್ರೀಕರಣ ಮಾಡಲಿ, ಆದರೆ, ಒಬ್ಬನೇ ಮೇಯರ್ ಇರಲಿ. ಬೇರೆ ಬೇರೆ ಮೇಯರ್‌ಗಳಾದರೆ, ಒಂದೊAದು ಆಡಳಿತ ಒಂದೊAದು ರೀತಿ ಇರುತ್ತದೆ. ಅಂತಹ ಪರಿಸ್ಥಿತಿ ಬೇಡ ಎಂದು ತಿಳಿಸಿದರು.
ನಾಲ್ಕು ಮೇಯರ್ ಆದರೆ, ಯಾರಾದರೂ ಗಣ್ಯರು ಬಂದಾಗ ಯಾವ ಮೇಯರ್ ಹೋಗಬೇಕು ಎಂಬುದು ಗೊಂದಲವಾಗುತ್ತದೆ. ಹೀಗಾಗಿ, ಒಬ್ಬನೇ ಮೇಯರ್ ಇರಲಿ. ಡಿಕೆ ಶಿವಕುಮಾರ್ ಅವರಿಗೆ ಆ ಶಕ್ತಿ ಇದೆ. ಡಿಕೆಶಿ ಹೆಸರು ಶಾಶ್ವತವಾಗಿ ಉಳಿಯಲಿ ಎಂದು ಒತ್ತಾಯಿಸಿದರು.
ಡಿಕೆಶಿವಕುಮಾರ್ ಅವರ ದೂರದೃಷ್ಟಿಯ ಬಗ್ಗೆ ನಮಗೆ ಹೆಮ್ಮೆಯಿದೆ. ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಮತ್ತೊಬ್ಬ ಕೆಂಪೇಗೌಡ ಅಭಿವೃದ್ಧಿ ಮಾಡಿದ ಹೆಸರು ಶಾಶ್ವತವಾಗಿರಲಿ. ದೊಡ್ಡ ಗ್ರೇಟರ್ ಬೆಂಗಳೂರು ಭವನ ಕಟ್ಟಿ, ವಿಧಾನಸೌಧ, ವಿಕಾಸಸೌಧದ ಮಾದರಿಯಲ್ಲಿ ಮಾದರಿಯಾಗಿ ಉಳಿಯಲಿ ಎಂದು ತಿಳಿಸಿದರು.