ಸುಳ್ಯ: ಕುಡಿದ ಮತ್ತಿನಲ್ಲಿ ಪತ್ನಿಗೆ ಗುಂಡಿಕ್ಕಿ ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಳ್ಯ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಕೋಡಿಮಜುಲು ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ರಾಮಚಂದ್ರ ಎಂಬಾತ ಕುಡಿದು ಬಂದು ಪತ್ನಿಯೊಂದಿಗೆ ನಿತ್ಯವೂ ಗಲಾಟೆ ಮಾಡಿಕೊಳ್ಳುತ್ತಿದ್ದ. ಎಂದಿನAತೆ ಹೆಂಡತಿ ವಿನೋದಾಗೆ ಹೊಡೆಯುತ್ತಿದ್ದಾಗ, ಅವರ ಪುತ್ರ ಪ್ರಶಾಂತ್ ಜಗಳ ಬಿಡಿಸಲು ಬಂದಿದ್ದ ಎನ್ನಲಾಗಿದೆ.
ಮಗನ ಮೇಲೆ ಕೋಪಗೊಂಡ ರಾಮಚಂದ್ರ ಬಂದೂಕಿನಿAದ ಆತನ ಮೇಲೆ ಗುಂಡು ಹಾರಿಸಲು ಮುಂದಾಗಿದ್ದು, ತಾಯಿ ವಿನೋದಾ ಮಗನಿಗೆ ಅಡ್ಡಲಾಗಿ ಬಂದಿದ್ದಾರೆ. ಈ ವೇಳೆ ಆಕೆಯ ಎದೆಗೆ ಗುಂಡು ತಗುಲಿ ಆಕೆ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾಳೆ.
ಹೆಂಡತಿ ಸಾವಿನ ಭಯದಿಂದ ಪತಿ ರಾಮಚಂದ್ರ ತಾನೂ ಆಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕೆಕ ಪೊಲೀಸರು ಬಂದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.