ಚಿಂಚೋಳಿ: ಲಾರಿ ಮತ್ತು ಕಾರ್ ನಡುವೆ ಸಂಭವಿಸಿದ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮರಣವೊಂದಿರುವ ಘಟನೆ ತಾಲೂಕಿನ ಮಗದಂಪುರ ಬಳಿ ನಡೆದಿದೆ.
ಚಿಂಚೋಳಿಯಿAದ ತೆಲಂಗಾಣದ ಕಡೆಗೆ ತೆರಳುತ್ತಿದ್ದ ಕಾರು ಮತ್ತು ತೆಲಂಗಾಣದಿAದ ಬೀದರ್‌ನ ಧಾದೂರ್ ಕಡೆಗೆ ಬರುತ್ತಿದ್ದ ಲಾರಿ ನಡುವೆ ಅಪಘಾತ ಸಂಭವಿಸಿದೆ. ಮೂವರು ಯುವಕರು ಮರಣವೊಂದಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತಪಟ್ಟವರನ್ನು ಅವಿನಾಶ್(24) ಅಭಿಷೇಕ್(26) ಹಾಗೂ ಸಂಜೀವ್(40) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಗದಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.