ಕ್ಯಾಪ್ಸಿಕಾಮ್ ಬೆಲೆ Android ಫೋನ್‌ನಲ್ಲಿ 20 ರು, iphoneನಲ್ಲಿ ಬುಕ್ ಮಾಡಿದರೆ 127 ರುಪಾಯಿ !
ಬೆಂಗಳೂರು: Android ಫೋನ್ ಮತ್ತು ಐಫೋನ್ ಬಳಕೆದಾರರ ನಡುವೆ ವ್ಯತ್ಯಾಸ ಇರುವುದೇನೋ ನಿಜವೇ. ಆದರೆ, ತರಕಾರಿಯ ಬೆಲೆ ಈ ಎರಡು ಫೋನ್ ಬಳಕೆ ಮಾಡುವವರ ನಡುವೆ ವ್ಯತ್ಯಾಸವಾಗುತ್ತೆ ಅಂದ್ರೆ ನೀವು ನಂಬ್ತೀರಾ?
ಹೌದು, ನಂಬಲೇಬೇಕು. ಏಕೆಂದರೆ ಬೆಂಗಳೂರಿನ ಉದ್ಯಮಿಯೊಬ್ಬರು Android ಫೋನ್ ನಿಂದ ಆನ್‌ಲೈನ್ ಡೆಲಿವೆರಿ ಅಫ್ಲಿಕೇಷನ್ ಜೆಫ್ಟೋದಲ್ಲಿ ಕ್ಯಾಪ್ಸಿಕಾಮ್ ಬುಕ್ ಮಾಡಿದ್ದಾರೆ. ಆಗ ಅದರ ಬೆಲೆ 20 ರು ಎಂದು ತೋರಿಸಿದೆ. ಆದರೆ, ಅದೇ ಬೆಲೆ ಐಫೋನ್‌ನಲ್ಲಿ ಜಾಸ್ತಿ ತೋರಿಸಿದೆ.
ಕುತೂಹಲಕ್ಕೆಂದು ಆ ಉದ್ಯಮಿ ತಮ್ಮ ಬಳಿಯಿದ್ದ ಐಫೋನ್‌ನಿಂದಲೂ ಕ್ಯಾಪ್ಸಿಕಾಮ್ ಬುಕ್ ಮಾಡುವ ಪ್ರಯತ್ನ ಮಾಡಿದ್ದಾರೆ. ಆಗ ಅದೇ ಆಪ್‌ನಲ್ಲಿ ಕ್ಯಾಪ್ಸಿಕಾಮ್ ಬೆಲೆಯನ್ನು 127 ರು. ಎಂದು ತೋರಿಸಿದೆ. ಇಂತಹ ವ್ಯತ್ಯಾಸವನ್ನು ಗಮನಿಸಿದ ಅವರು ಈ ಎರಡು ಸ್ಕ್ರೀನ್‌ಶಾಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊAಡಿದ್ದಾರೆ.
ಇದೀಗ ಈ ಪೋಸ್ಟ್ ಗಂಭೀರ ಚರ್ಚೆ ಮತ್ತು ಟ್ರೋಲ್‌ಗಳನ್ನು ಹುಟ್ಟುಹಾಕಿದೆ. ಬೆಂಗಳೂರು ನಗರದಲ್ಲಿ ಇರುವ ಬೆಲೆ ವ್ಯತ್ಯಾಸದ ಬಗ್ಗೆ ಅನೇಕರು ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ. ಕೆಲವರು ಇದೇ ವಿಷಯವನ್ನು ಟ್ರೋಲ್ ಮಾಡಿದ್ದಾರೆ.
ಟ್ವೀಟ್ ಮಾಡಿರುವ ಬೆಂಗಳೂರು ಮೂಲದ ಉದ್ಯಮಿ ವಿನಿತಾ ಸಿಂಗ್, ಒಂದೇ ಲೊಕೇಷನ್‌ನಿಂದ, ಒಂದೇ ಸಮಯದಲ್ಲಿ ಜೆಪ್ಟೋ ಆಪ್‌ನಿಂದ 500 ಗ್ರಾಂ ಕ್ಯಾಪ್ಸಿಕಾಮ್ ಬುಕ್ ಮಾಡಿದ್ದಾರೆ. ಈ ವೇಳೆ Android ಫೋನ್‌ನಲ್ಲಿ 20 ರು ಬೆಲೆಯನ್ನು, ಐಫೋನ್‌ನಲ್ಲಿ 127 ರು. ಬೆಲೆಯನ್ನು ಸೂಚಿಸಿದೆ.
ಇದನ್ನು ಅವರು ತಮ್ಮ ಖಾತೆಯಲ್ಲಿ ಹಂಚಿಕೊAಡಿದ್ದಾರೆ. ಇದೀಗ ಈ ಪೋಸ್ಟ್ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಕಂಪನಿ ಈವರೆಗೆ ಯಾವುದೇ ಸಮರ್ಥನೆಯನ್ನು ನೀಡಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.


