ಬೆಂಗಳೂರು: ಬಿಗ್ ಬಾಸ್ ಕನ್ನಡದ 11 ನೇ ಸೀಸನ್ ಮುಗಿದಿದ್ದು, ಜನಪದ ಪ್ರತಿಭೆ, ಹಳ್ಳಯ ಹೈದ ಹನುಮಂತು ವಿನ್ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶನಿವಾರ ಮತ್ತು ಶುಕ್ರವಾರ ಬಿಗ್ ಬಾಸ್ ಕನ್ನಡದ 11 ನೇ ಸೀಸನ್‌ನ ಫೈನಲ್ ನಡೆಯುತ್ತಿದ್ದು, ಅಂತಿಮ ಘೋಷಣೆ ಬಾಕಿಯಿದೆ. ಆದರೆ, ಈಗಾಗಲೇ ರೆಕಾರ್ಡ್ ಆಗಿರುವ ಕಾರ್ಯಕ್ರಮದ ವರದಿಯ ಪ್ರಕಾರ ಹನುಮಂತು ಅಂತಿಮವಾಗಿ ವಿನ್ನರ್ ಆಗಿ ಆಯ್ಕೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೊನೆಯ ದಿನ ಮನೆಯಲ್ಲಿ ಐದು ಮಂದಿ ಸ್ಪರ್ಧಿಗಳಿದ್ದರು. ಮೊದಲ ಸ್ಪರ್ಧಿಯಾಗಿ ಉಗ್ರಂ ಮಂಜು ಮನೆಯಿಂದ ಹೊರಬಂದರು. ಅನಂತರ ಮೋಕ್ಷಿತಾ ಪೈ ಮನೆಯಿಂದ ಹೊರಬಂದರು. ಉಳಿದ ಮೂರು ಸ್ಪರ್ಧಿಗಳನ್ನು ಕಿಚ್ಚ ಸುದೀಪ್ ಸ್ವತಃ ಮನೆಯೊಳಗೆ ಹೋಗಿ ಹೊರಗೆ ಕರೆತಂದು ವೇದಿಕೆಯ ಮೇಲೆ ಅಂತಿಮವಾಗಿ ಸ್ಪರ್ಧಿಗಳನ್ನು ಆಯ್ಕೆ ಮಾಡಿದರು.
ಎರಡನೇ ರನ್ನರ್ ಆಪ್ ಆಗಿ ರಜತ್ ಆಯ್ಕೆಯಾಗಿದ್ದು, ವರದಿಯ ಪ್ರಕಾರ ತ್ರಿವಿಕ್ರಮ್ ಮತ್ತು ಹನುಮಂತು ಅಂತಿಮವಾಗಿ ಫೈನಲ್ ಪ್ರವೇಶಿಸಿದ್ದರು. ಇಬ್ಬರ ಹೈಹಿಡಿದ ಕಿಚ್ಚ ಸುದೀಪ್ ತ್ರಿವಿಕ್ರಮ್ ಮತ್ತು ಹನುಮಂತು ಪೈಕಿ ಹನುಮಂತು ಕೈ ಎತ್ತುವ ಮೂಲಕ ವಿನ್ನರ್ ಎಂದು ಘೋಷಣೆ ಮಾಡಿದರು. ಹನುಮಂತು ಈ ಸೀಸನ್‌ನ ಅತಿಹೆಚ್ಚು ವೋಟ್ ಪಡೆದ ಸ್ಪರ್ಧಿಯಾಗಿದ್ದರು.
ಹನುಮಂತು ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಮನೆಗೆ ಬಂದಿದ್ದರು. ಜಗದೀಶ್ ವಿವಾದಾತ್ಮಕ ಕಾರಣಕ್ಕೆ ಹೊರಗೆ ಬಂದ ನಂತರ ಬಿಗ್ ಬಾಸ್ ಟಿಆರ್‌ಪಿ ನೆಲಕಚ್ಚಿತ್ತು. ಆಗ ಮನೆಗೆ ಆಗಮಿಸಿದ ಹನುಮಂತು ಕಾರಣಕ್ಕೆ ಬಿಗ್‌ಬಾಸ್ ಮತ್ತೇ ಸದ್ದು ಮಾಡಿತ್ತು. ಅಂತಿಮವಾಗಿ ಹನುಮಂತು ವಿನ್ ಆಗಿದ್ದಾರೆ. ಕಾರ್ಯಕ್ರಮವೂ ಅತ್ಯಂತ ಯಶಸ್ವಿಯಾಗಿ ಪೂರ್ಣವಾಗಿದೆ ಎನ್ನಬಹುದು.