ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ನೀಡಿರುವ ಪದ್ಮಶ್ರೀ ಪ್ರಶಸ್ತಿಗಳು ಪ್ರಕಟವಾಗಿದ್ದು, ಕನ್ನಡ ಖ್ಯಾತ ನಟ ಅನಂತನಾಗ್ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಗಣರಾಜ್ಯೋತ್ಸವದ ಅಂಗವಾಗಿ ಘೋಷಣೆ ಮಾಡಲಾದ ಪದ್ಮಶ್ರೀ ಪ್ರಶಸ್ತಿಗಳ ಪೈಕಿ ನಟ ಅನಂತನಾಗ್ ಸೇರಿ ರಾಜ್ಯದ ಇಬ್ಬರಿಗೆ ಪದ್ಮಭೂಷಣ, ಒಬ್ಬರಿಗೆ ಪದ್ಮವಿಭೂಷಣ ಹಾಗೂ ಆರು ಜನರಿಗೆ ಪದ್ಮಶ್ರೀ ಪ್ರಶಸ್ತಿಗಳು ಲಭಿಸಿವೆ. ರಾಜ್ಯದ ಮತ್ತೊಬ್ಬ ಸಾಧಕರಾದ ಅರಕಲಗೂಡು ಸೂರ್ಯಪ್ರಕಾಶ್ ಅವರು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಲಾ ವಿಭಾಗದಲ್ಲಿ ನಟ ಅನಂತ್ ನಾಗ್ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರೆ, ಶಿಕ್ಷಣ, ಪತ್ರಿಕೋಮದ್ಯಮ ಕ್ಷೇತ್ರದಲ್ಲಿ ಅರಕಲಗೂಡು ಸೂರ್ಯನಾರಾಯಣ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಲಕ್ಷಿö್ಮÃನಾರಾಯಣ ಸುಬ್ರಮಣ್ಯ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದೆ.
ಶ್ಯಾತ ಶಿಳ್ಳೇಕ್ಯಾತ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ, ಜಾನಪದ ಕಾಲಾವಿದರಾದ ವೆಂಕಪ್ಪ ಅಂಬಾಜಿ, ಚಲನಚಿತ್ರ ನಿದೇಶಕ ರಘು ಹಾಸನ್, ಖ್ಯಾತ ವೈದ್ಯೆ ಡಾ. ವಿಜಯಲಕ್ಷ್ಮಿ ದೇಶಮಾನೆ ಹಾಗೂ ಉದ್ಯಮಿ ಪ್ರಶಾಂತ್ ಪ್ರಕಾಶ್, ಸಂಗೀತ ನಿದೇರ್ಶಕ ರಿಷಿ ಕೇಜ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.