ಬೆಂಗಳೂರು: ಕೇಂದ್ರ ಬಜೆಟ್‌ನಿಂದ ನಾವೇನೂ ನಿರೀಕ್ಷೆ ಮಾಡಿರಲಿಲ್ಲ, ಏಕೆಂದರೆ ಅವರು 53 ಲಕ್ಷ ಕೋಟಿಯಿದ್ದ ಸಾಲವನ್ನು 200 ಲಕ್ಷ ಕೋಟಿಗೇರಿಸಿದ್ದೇ ಅವರ ಸಾಧನೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವ್ಯಂಗ್ಯವಾಡಿದ್ದಾರೆ.
ಕೇAದ್ರ ಬಜೆಟ್ ಕುರಿತು ಮಾತನಾಡಿದ ಅವರು, ಮೋದಿ ಅವರ ಆಡಳಿತದಲ್ಲಿ ಯಾವುದಾದರೂ ವಸ್ತುವಿನ ಬೆಲೆ ಕಡಿಮೆಯಾಗಿದೆಯಾ? ಜನರ ಆದಾಯ ಜಾಸ್ತಿ ಆಗಿದೆಯಾ? ಖರ್ಚು ಮಾತ್ರವೇ ಜಾಸ್ತಿಯಾಗಿದೆ. ದೇಶದ ಸಾಲ ಮಾತ್ರವೇ ಹೆಚ್ಚಾಗಿದೆ. 1947 ರಿಂದ ಇಲ್ಲಿವರೆಗೆ 53 ಲಕ್ಷ ಕೋಟಿ ಇದ್ದ ಸಾಲವನ್ನು 11 ವರ್ಷದಲ್ಲಿ 200 ಲಕ್ಷ ಕೋಟಿಗೇರಿಸಿದ್ದೆ ಮೋದಿ ಅವರ ಸಾಧನೆ ಎಂದರು.
ನರೇAದ್ರ ಮೋದಿ ಸರಕಾರ ಬಂದ ಮೇಲೆ ಎಲ್ಲದರ ಮೇಲೆಯೂ ತೆರಿಗೆಯ ಬರೆ ಎಳೆದಿದ್ದಾರೆ. ಎಲ್ಲದರ ಬೆಲೆಯೂ ಹೆಚ್ಚಾಗಿದೆ. ಗಾಳಿ, ಬೆಳಕು ಎರಡನ್ನು ಬಿಟ್ಟು ಮತ್ತೆಲ್ಲದರ ಬೆಲೆಯನ್ನು ಏರಿಕೆ ಮಾಡಿದ್ದಾರೆ. ಬಜೆಟ್‌ನಿಂದ ರಾಜ್ಯಕ್ಕೆ ಮೂರು ಕಾಸಿನ ಪ್ರಯೋಜನವಾಗಿಲ್ಲ. ಮೋದಿ ಸರಕಾರದಿಂದ ನಾವು ಅದನ್ನು ನಿರೀಕ್ಷೆ ಮಾಡಲು ಸಾಧ್ಯವೂ ಇಲ್ಲ ಎಂದರು.