ಚಿಕ್ಕಬಳ್ಳಾಪುರ: ಸುಧಾಕರ್ ಚಿಕ್ಕಬಳ್ಳಾಪುರಕ್ಕೆ ಅಂಟಿದ ಶಾಪ. ಆತನಿಂದ ಕ್ಷೇತ್ರವೂ ಅಭಿವೃದ್ಧಿಯಾಗಿಲ್ಲ, ಬಿಜೆಪಿಗೂ ಯಾವುದೇ ಲಾಭವಿಲ್ಲ ಎಂದು ಬಿಜೆಪಿ ಮುಖಂಡ ಸಂದೀಪ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಆಯ್ಕೆಯಾಗಿದ್ದ ಸಂದೀಪ್ ಆಯ್ಕೆಯನ್ನು ಹೈಕಮಾಂಡ್ ರದ್ದುಗೊಳಿಸುವ ಆದೇಶ ನೀಡಿದ ಬೆನ್ನಲ್ಲೇ ಸುಧಾಕರ್ ವಿರುದ್ಧ ಕಿಡಿಕಾರಿರುವ ಸಂದೀಪ್ ರೆಡ್ಡಿ, ಸುಧಾಕರ್ ಅವರು ಚಿಕ್ಕಬಳ್ಳಾಪುರಕ್ಕೆ ಅಂಟಿದ ಶಾಪ ಎಂದು ಗುಡುಗಿದ್ದಾರೆ.
ಸುಧಾಕರ್ ಚಾರಿತ್ರö್ಯ ಏನು ಎಂಬುದು ಪ್ರಧಾನಿ ನರೇಂದ್ರ ಮೋದಿಅವರಿಗೂ ಗೊತ್ತಾಗಲಿ. ಸುಧಾಕರ್ ಸ್ವಂತ ಬಲದಿಂದ ಸಂಸದರಾಗಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿಯಿಂದ ಗೆದ್ದು, ಇದೀಗ ಬಿಜೆಪಿಯನ್ನು ಸರ್ವನಾಶ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದರು.
ಜಿಲ್ಲಾಧ್ಯಕ್ಷರ ಆಯ್ಕೆ ಸಮರ್ಪಕವಾಗಿಯೇ ಆಗಿದೆ. ಇದನ್ನು ಯಾರೂ ಪ್ರಶ್ನೆ ಮಾಡುವಂತಿರಲಿಲ್ಲ. ಕಾರ್ಯಕರ್ತರ ಅಭಿಪ್ರಾಯವನ್ನು ಪಡೆದುಕೊಂಡೇ ಜಿಲ್ಲಾಧ್ಯಕ್ಷರ ಆಯ್ಕೆ ನಡೆದಿತ್ತು. ಆದರೆ, ಇದಕ್ಕೆ ತಕರಾರು ತೆಗೆಯುವ ಮೂಲಕ ತಮ್ಮ ಗುಣ ತೋರಿದ್ದಾರೆ ಎಂದು ಗುಡುಗಿದ್ದಾರೆ.
