ಉಡುಪಿ: ನೆನ್ನೆ ಉಡುಪಿ ಜಿಲ್ಲಾಡಳಿತ ಮುಂದೆ ಶರಣಾದ ನಕ್ಸಲ್ ಕಾರ್ಯಕರ್ತ ಲಕ್ಷ್ಮಿ ತೊಂಬಟ್ಟು ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಲಯ ಆದೇಶ ನೀಡಿದೆ.
ಲಕ್ಷ್ಮಿ ತೊಂಬಟ್ಟು ವಿರುದ್ಧ ಉಡುಪಿಯ ಅಮಾವಾಸ್ಯೆ ಬೈಲು ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿತ್ತು. ಭಾನುವಾರ ನಕ್ಸಲ್ ಶರಣಾಗತಿ ಸಮಿತಿಯ ನೇತೃತ್ವದಲ್ಲಿ ಅವರನ್ನು ಉಡುಪಿ ಜಿಲ್ಲಾಡಳಿತದ ಮುಂದೆ ಶರಣಾಗತಿ ಮಾಡಿಸಲಾಗಿತ್ತು.
ಶರಣಾಗತಿ ನಂತರ ಜಿಲ್ಲಾಡಳಿತ ಹೆಚ್ಚಿನ ವಿಚಾರಣೆಗಾಗಿ ಡಿವೈಎಸ್‌ಪಿಗೆ ಹಸ್ತಾಂತರ ಮಾಡಿದ್ದು, ಪೊಲೀಸರು ವಿಡಿಯೋ ಕಾನ್ಫರನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಚಿಕ್ಕಮಗಳೂರು ಜೆಎಂಎಫ್‌ಸಿ ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.