ವಿದೇಶಿ ಭಾಷೆಗಳ ಕಲಿಕೆಗೆ ವಾರಾಂತ್ಯ ತರಗತಿ ಆರಂಭಿಸಿದ ಬೆಂಗಳೂರು ನಗರ ವಿವಿ

1550474799phpxlbdlU_g
Share It

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರವು ವಾರಾಂತ್ಯದಲ್ಲಿ ವಿದೇಶಿ ಭಾಷೆಗಳ ಕಲಿಕೆಗೆ ಅವಕಾಶ ಕಲ್ಪಿಸುತ್ತಿದೆ.

ಫ್ರೆಂಚ್‌, ಜರ್ಮನ್‌, ಸ್ಪ್ಯಾನಿಷ್, ಜಪಾನೀಸ್‌, ಕೊರಿಯನ್‌, ಚೈನೀನ್‌, ಇಟಾಲಿಯನ್‌, ಪೋರ್ಚುಗೀಸ್‌ ಭಾಷಾ ತರಗತಿಗಳು ಆರಂಭವಾಗುತ್ತಿದೆ. ದ್ವಿತೀಯ ಪಿಯುಸಿ ಅಥವಾ ಸಮಾನಂತರ ಶಿಕ್ಷಣದಲ್ಲಿ ಪಾಸಾಗಿರುವವರು ಅರ್ಜಿ ಸಲ್ಲಿಸಬಹುದು. ಉನ್ನತ ಶಿಕ್ಷಣ ಇಲಾಖೆಯ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್‌) ಅಡಿ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದು.

ಪ್ರತಿಯೊಂದು ಭಾಷಾ ಕೋರ್ಸಿಗೆ 1 ವರ್ಷದ ಸರ್ಟಿಫಿಕೇಟ್‌ ಕೋರ್ಸು, 1 ವರ್ಷದ ಯುಜಿ ಡಿಪ್ಲೊಮಾ ಕೋರ್ಸ್ ಹಾಗೂ 1 ವರ್ಷದ ಪಿಜಿ ಡಿಪ್ಲೊಮಾ ಕೋರ್ಸ್ ವ್ಯಾಸಂಗದ ಆಧಾರದಲ್ಲಿ ಸರ್ಟಿಫಿಕೇಟ್‌‌ ನೀಡಲಾಗುತ್ತದೆ. ಆಸಕ್ತರು ದೂ: 080-ಬಗ್ಗೆ 29572019/9353251761ಗೆ ಕರೆ ಮಾಡಬಹುದು.

ಅಥವಾ ವಿವಿಯ ಜಾಲತಾಣ www.bcu.ac.inಗೆ ಭೇಟಿ ನೀಡಬಹುದು ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯ ಪ್ರಕಟಣೆ ತಿಳಿಸಿದೆ.


Share It

You cannot copy content of this page