ನಿಮ್ಮ ಮನೆಯಲ್ಲಿ ಈ ಹೂವಿನ ಗಿಡ ಇದೆಯಾ? ಹಾಗಾದ್ರೆ, ಹಣ, ನೆಮ್ಮದಿ ನಿಮ್ಮದಾಗೋದು ಸುಲಭ
ಭಾರತೀಯರಾದ ನಾವು ಕಥೆ, ಪುರಾಣ ಮತ್ತು ಜೋತಿಷ್ಯಗಳನ್ನು ಬಲವಾಗಿ ನಂಬುತ್ತೇವೆ. ನಾವು ನಿತ್ಯವು ದಿನ ಭವಿಷ್ಯವನ್ನು ನೋಡುವುದುಂಟು. ಹಾಗೆಯೇ ವಾಸ್ತುವಿನ ಪ್ರಕಾರ ಕೆಂಪು ಬಣ್ಣದ ಹೂ ನಮ್ಮ ಭವಿಷ್ಯವನ್ನು ಬದಲಾಯಿಸುತ್ತದೆ ಎಂದು ಹೇಳುತ್ತಾರೆ. ಆ ಕೆಂಪು ಹೂ ಯಾವುದು ಮತ್ತು ಆ ಹೂವಿನಿಂದ ಆಗುವ ಲಾಭಗಳೇನು ಎಂಬುದನ್ನು ತಿಳಿಯೋಣ ಬನ್ನಿ.
ದಾಸವಾಳ ಹೂ ನಮ್ಮ ಸುತ್ತಮುತ್ತಲು ಹೆಚ್ಚು ದೊರೆಯುವ ಹೂವು ಆಗಿದೆ. ದಾಸವಾಳ ಹೂವು ಸಂಪತ್ತಿನ ಒಡತಿಯಾದ ಲಕ್ಷ್ಮಿಗೆ ಇಷ್ಟವಾದ ಹೂವು ಆಗಿದೆ. ಇದನ್ನು ನಮ್ಮ ಮನೆಯ ನಿರ್ದಿಷ್ಟ ಮೂಲೆಯಲ್ಲಿ ನೆಟ್ಟರೆ ಮನೆಯಲ್ಲಿ ಸಂಪತ್ತು ಕ್ರೋಢೀಕರಣಗೊಳ್ಳುತ್ತದೆ ಎಂಬ ಮಾತಿದೆ.
ವಾಸ್ತು ಶಾಸ್ತ್ರವು ಹೇಳುವಂತೆ ದಾಸವಾಳ ಹೊರತು ಪಡಿಸಿ ಇತರ ಕೆಂಪು ಬಣ್ಣದ ಹೂವುಗಳು ನಮಗೆ ಸಂಪತ್ತನ್ನು ತಂದು ಕೊಡುತ್ತವೆ ಎಂದು ನಂಬಲಾಗಿದೆ. ಈ ಹೂವು ಸಾಲಬಾಧೆ, ಹಣಕಾಸಿನ ತೊಂದರೆ ಹಾಗೂ ಇತರ ಸಮಸ್ಯೆಗಳನ್ನು ದೂರಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.
ನಮ್ಮ ಮನೆಯ ಮುಂದೆ ದಾಸವಾಳದ ಗಿಡವನ್ನು ನೆಡುವುದಾದರೆ, ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಬೆಳೆಸುವುದು ಒಳ್ಳೆಯದು. ಇದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ದೂರವಾಗುತ್ತದೆ. ಲಕ್ಷ್ಮಿಗೆ ಬಹಳ ಪ್ರಿಯವಾದ ಹೂವು ಕೂಡ ದಾಸವಾಳ.
ನೀವು ತೀವ್ರ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ಮೊದಲು ನೀವು ಹಣ ಇಡುವ ಪೆಟ್ಟಿಗೆ ಗಣೇಶ ಮತ್ತು ದುರ್ಗಾ ದೇವಿಯನ್ನು ಪ್ರಾರ್ಥನೆ ಮಾಡಿಕೊಂಡು ಏಳು ದಿನ ಸತತವಾಗಿ ಪ್ರತಿ ಶುಕ್ರವಾರ ಒಂದು ದಾಸವಾಳದ ಹೂವನ್ನು ಪೆಟ್ಟಿಗೆಗೆ ಹಾಕಿ ಸಮಸ್ಯೆ ಪರಿಹಾರವಾಗುತ್ತದೆ.
ಗಂಡ ಹೆಂಡತಿ ನಡುವೆ ಸಾಮಾನ್ಯವಾಗಿ ಸಣ್ಣ ಪುಟ್ಟ ಜಗಳಗಳು ನಡೆಯುತ್ತಲೇ ಇರುತ್ತವೆ. ಕೆಲ ಬಾರಿ ಅದು ತಾರಕಕ್ಕೆ ಹೋಗುವುದು ಇದೆ. ನೆಮ್ಮದಿಯಿಂದ ಬದುಕಲು ನಿಮ್ಮ ಮಲಗುವ ದಿಂಬಿನ ಕೆಳಗೆ ಒಂದು ದಾಸವಾಳದ ಹೂವನ್ನು ಇಟ್ಟುಕೊಂಡು ಮಲಗುವುದರಿಂದ ನಿಮ್ಮ ಸಂಬಂಧ ಗಟ್ಟಿಯಾಗುತ್ತದೆ. ಪ್ರೀತಿ ವಿಶ್ವಾಸ ಮೂಡುತ್ತದೆ. ಒಂದು ತಾಮ್ರದ ಬಿಂದಿಗೆಯಲ್ಲಿ ನೀರು ಇಟ್ಟು ಅದರಲ್ಲಿ ಒಂದು ಕೆಂಪು ದಾಸವಾಳ ಹಾಕಿ ಪೂಜಿಸುವುದರಿಂದ ಸೂರ್ಯ ದೇವನ ಅನುಗ್ರಹ ಪಡೆಯಬಹುದಾಗಿದೆ.


