ಲಖನೌ: ಉತ್ತರ ಪ್ರದೇಶದ ಲಖನೌದಲ್ಲಿ ಬಹುಮಹಡಿ ಕಟ್ಟಡವೊಂದು ಕುಸಿದು 8ಮಂದಿ ಮೃತಪಟ್ಟು 28ಮಂದಿಗೆ ಗಾಯವಾಗಿರುವ ಘಟನೆ ನಡೆಸಿದೆ.
ಪೊಲೀಸ್ ತಂಡ, ರಾಷ್ಟ್ರೀಯ ವಿಪತ್ತು ನಿರ್ವಾಹಣಾ ಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಪರಿಹಾರ ಕಾರ್ಯದಲ್ಲು ತೊಡಗಿಸಿಕೊಂಡಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಸುತ್ತಮುತ್ತಲಿನ ಕಟ್ಟಡಗಳನ್ನು ತೆರವು ಮಾಡಲಾಗಿದೆ.
ಸರೋಜಿನಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಾರಿಗೆ ನಗರದಲ್ಲಿ ಘಟನೆ ನಡೆದಿದೆ. ಸಾರಿಗೆ ನಗರದಲ್ಲಿ ಭಾರೀ ಮಳೆಗೆ ಹರ್ಮಿಲಾಪ್ ಟವರ್‌ನ ಎಡಭಾಗ ಕುಸಿದಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದು, ರಕ್ಷಣಾ ಕಾರ್ಯ ಚುರುಕುಗೊಳಿಸಿ ಗಾಯಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.

