ಮನೆಯಲ್ಲಿ ಇದ್ದರೆ ಚಿನ್ನ ಚಿಂತೆಯು ಏತಕೆ ಇನ್ನ ಎಂಬ ಜಾಹೀರಾತನ್ನು ನಾವು ಕೇಳಿಯೇ ಇರುತ್ತೇವೆ. ಚಿನ್ನ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲರೂ ಚಿನ್ನವನ್ನು ಇಷ್ಟ ಪಡುತ್ತಾರೆ. ಶುಭ ಕಾರ್ಯಗಳಿಗೆ ಚಿನ್ನವು ಇರಲೇಬೇಕು ಎಂಬ ಕಲ್ಪನೆ ಇದೆ. ಅಷ್ಟಕ್ಕೂ ಚಿನ್ನ ಭೂಮಿಯ ಮೇಲೆ ಬಂದದ್ದು ಹೇಗೆ? ಅದು ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ಈ ಸ್ಟೋರಿಯಲ್ಲಿ ನೋಡೋಣ.
ಈ ಹಿಂದೆ ಚಿನ್ನದ ಉಗಮದ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದು ಚಿನ್ನದ ಉಗಮದ ಬಗ್ಗೆ ವಿವರಿಸಿದ್ದವು. ಆ ವರದಿಗಳು ಹೇಳುವಂತೆ ಭೂಮಿಯ ಒಳಗೆ ವಿವಿಧ ಖನಿಜ ಸಂಪತ್ತುಗಳು ಉಷ್ಣಕ್ಕೆ ಕಾದು ನೀರಾಗಿ ಹರಿಯುತ್ತವೆ. ಅವು ತಣ್ಣಗಾದ ಮೇಲೆ ಚಿನ್ನದ ಅದಿರಾಗಿ ರೂಪುಗೊಳ್ಳುತ್ತದೆ ಎಂದು ಹೇಳಿದ್ದವು.
“ಭೂಮಿಯು ರೂಪುಗೊಳ್ಳುತ್ತಿದ್ದ ಕಾಲದಲ್ಲಿ ಇತರ ಗ್ರಹಗಳು ಭೂಮಿಗೆ ಡಿಕ್ಕಿ ಹೊಡೆದವು. ಈ ವೇಳೆ ಅವುಗಳ ಚೂರುಗಳು ಭೂಮಿಯ ಒಳಕ್ಕೆ ನುಗ್ಗಿದ್ದವು. ಈ ಹಿಂದೆ ಇದ್ದ ಖನಿಜಕ್ಕಿಂತ ಐದು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಚಿನ್ನದ ಜೊತೆಗೆ ಪ್ಲಾಟಿನಂ ವಸ್ತುಗಳು ಸಹ ರಚನೆಯಾಗಿದ್ದು ಗ್ರಹಗಳು ಡಿಕ್ಕಿ ಹೊಡೆದಾಗ ” ಎಂದು ಅಮೆರಿಕದ ಸೌತ್‌ವೆಸ್ಟ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕ ಸಿಮೋನ್ ಮಾರ್ಚ್ ತಿಳಿಸಿದ್ದಾರೆ.
ಭೂಕಂಪಗಳು ಕ್ವಾರ್ಟ್ಜ್ ಜೊತೆಗೆ ಪೀಜೋಎಲೆಕ್ಟ್ರಿಸಿಟಿಯನ್ನು ಉತ್ಪಾದನೆ ಮಾಡುವುದರಿಂದ ಚಿನ್ನವು ಗಟ್ಟಿಗಳ ರಚನೆಯನ್ನು ಪಡೆಯಬಹುದು ಎಂದು ಡಾ. ಕ್ರಿಸ್ ವೋಯ್ಸಿ ಅಧ್ಯಯನ ಹೇಳುತ್ತದೆ.
ಚಿನ್ನದ ಬಗ್ಗೆ ಅನೇಕ ವರದಿಗಳು ಬಂದರೂ, ಚಿನ್ನದ ಉಗಮದ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ. ಅಮೆರಿಕದ ಕೆಲ ಭಾಗಗಳಲ್ಲಿ ಕಬ್ಬಿಣಕ್ಕಿಂತ ಮೊದಲು ದೊರೆತ ಲೋಹ ಚಿನ್ನ. ಅಲ್ಲಿನ ಜನರು ಚಿನ್ನದ ಪಾತ್ರೆಗಳು ಹೀಗೆ ಅನೇಕ ವಸ್ತುಗಳನ್ನು ಮಾಡುತ್ತಿದ್ದರು. ಬಳಿಕ ಕಬ್ಬಿಣ ದೊರೆಯಿತು. ಜ್ವಾಲಾಮುಖಿಗಳಿಂದ ಚಿನ್ನ ವೃದ್ಧಿಯಾಗಿದೆ ಎಂದು ಅಲ್ಲಿನ ಸಂಶೋಧನೆ ಹೇಳುತ್ತವೆ.
ಅಮೆರಿಕದಲ್ಲಿ ಚಿನ್ನವನ್ನು ಹೊತ್ತು ತರುವ ನದಿ ಹೊಂದಿದೆ. ಅಲ್ಲಿ ಆ ಚಿನ್ನವನ್ನು ಸಂಗ್ರಹಿಸಲು ಅಮೆರಿಕದವರು ಪ್ರಾನ್ಸಿಸ್ಸ್ಕೋ ಎಂಬ ನಗರವನ್ನು ಸ್ಥಾಪಿಸಿದರು. ಒಟ್ಟು ಅಮೆರಿಕವು 8000 ಟನ್ ಗಳಷ್ಟು ಚಿನ್ನವನ್ನು ಹೊಂದಿದ್ದು ವಿಶ್ವದ ಹೆಚ್ಚು ಚಿನ್ನ ಹೊಂದಿರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.