ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿದೆ_ ಜಿಲ್ಲಾಧಿಕಾರಿ ದಿವ್ಯಾ ಪ್ರಭು
ಕಳ್ಳತನವಾದ ಕಡಲೆ, ಹೆಸರು ಚೀಲಗಳು ಎರಡು ಮೂರು ದಿನಗಳಲ್ಲಿ ರೈತರ ಕೈ ಸಿರಲಿವೆ
ಅಣ್ಣಿಗೇರಿ: ಉಗ್ರಾಣದಲ್ಲಿ ನಾಪತ್ತೆಯಾದ ರೈತರ ಕಡಲೆ ಹಾಗೂ ಹೇಸರು ಚೀಲಗಳ ಉಗ್ರಾಣಕ್ಕೆ ಸೋಮವಾರ ಧಾರವಾಡ ಜಿಲ್ಲಾಧಿಕಾರಿಯಾದ ದಿವ್ಯ ಪ್ರಭು ಅಗಮಿಸಿ ಅಧಿಕಾರಿಗಳೋಂದಿಗೆ ಹಾಗೂ ಶಾಸಕರೋಂದಿಗೆ ಚರ್ಚೆ ನಡೆಸಿದರು.
ನಂತರ ಮಾತನಾಡಿ, ಕಳವಿನ ವಿಷಯ ತಿಳಿಯುತ್ತಿದ್ದಂತೆ ಬೆಂಗಳೂರಿನಿಂದ ಲೆಕ್ಕ ಪರಿಶೋಧಕರ ತಂಡವನ್ನು ಕರೆಸಿ ಇಲ್ಲಿನ ದಾಸ್ತಾನು ಹಾಗೂ ನಾಪತ್ತೆಯಾದ ಚೀಲಗಳ ಅಂಕಿ ಸಂಖ್ಯೆಗಳ ಮಾಹಿತಿ ಕಳೆಹಾಕಲಾಗಿದೆ. ಈಗಾಗಲೇ ಪೋಲಿಸ್ ಇಲಾಖೆ ತಪ್ಪು ಮಾಡಿದವರನ್ನು ಬಂದಿಸಿದೆ. ಅಲ್ಲದೆ ನೊಂದ ರೈತರಿಗೆ ಆದಷ್ಟು ಬೇಗ ಜಿಲ್ಲಾಡಳಿತ ಹಾಗೂ ಸರ್ಕಾರದ ವತಿಯಿಂದ ಕಷ್ಟ ಆಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ನಂತರ ಮುಂಗಾರು ಹಂಗಾಮಿನ ಹೆಸರು ಖರೀದಿ ಕೇಂದ್ರ ಪ್ರಾರಂಭವಾಗಿದೆ. ಆದರೆ, ಹವಮಾನ ವೈಪರೀತ್ಯದ ಕಾರಣ ಖರೀದಿ ಆಗುತ್ತಿಲ್ಲ, ಈಗಾಗಲೇ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆಯನ್ನು ಬೇಗನೆ ಸರಿಪಡಿಸಿ ಖರೀದಿಗೆ ಅನುಕೂಲ ಮಾಡಿಕೋಡಲಾಗುವದು ಎಂದು ಹೇಳಿದರು.
ನಂತರ ನಗರದ ಎಪಿಎಂಸಿಯ ಎರಡನೇ ಗೇಟಿನ ಮುಂಭಾಗದಲ್ಲಿ ಹಸಿರು ಸೇನೆ ಅನಿರ್ದಿಷ್ಟವಾಗಿ ಕೈಗೊಂಡ ಹೋರಾಟದ ವೇದಿಕೆಗೆ ಆಗಮಿಸಿದ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು, ಪ್ರತಿಭಟನಾಕಾರರ ಬೇಟಿಕೆ ಈಡೇರಿಸುವ ಭರವಸೆ ನೀಡಿದರು.
ಶಾಸಕ ಎನ್ಎಚ್ ಕೋನರಡ್ಡಿ ಮಾತನಾಡಿ, ರೈತರಿಗೆ ಇಂತಹ ವಿಚಾರದಲ್ಲಿ ದ್ರೋಹ ಮಾಡಿದ ಅಧಿಕಾರಿಗಳನ್ನು ಸರ್ಕಾರದ ಕೆಲಸದಿಂದ ವಜಾ ಮಾಡಲಾಗುವದು. ರೈತರು ಯಾವುದೇ ಕಾರಣಕ್ಕೂ ರೈತರು ಧೃತಿಗೆಡಬಾರದು. ಎಷ್ಟು ಚೀಲಗಳು ಕಳ್ಳತನವಾಗಿವೆ ಆ ರೈತರಿಗೆ ಕೇವಲ ಮೂರು ನಾಲ್ಕು ದಿನದಲ್ಲಿ ಕಾಳುಗಳು ಸಿಗುತ್ತವೆ ಎಂದು ಹೇಳಿದರು.
ಪೋಲಿಸ್ ವರಿಷ್ಠಾದಿಕಾರಿ ನಾರಾಯಣ ಭರಮನಿ, ಅಣ್ಣಿಗೇರಿ ತಹಸೀಲ್ದಾರ್ ಮಂಜುನಾಥ ದಾಸಪ್ಪನವರ, ಮುಖ್ಯಾಧಿಕಾರಿ ವಾಯ್ ಜಿ ಗದ್ದಿಗೌಡರ, ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ತಾಲೂಕು ಆಡಳಿತದ ಅಧಿಕಾರಿಗಳು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಂಜುನಾಥ ಮಾಯಣ್ಣನವರ, ರೈತರಾದ ಹನುಮಂತಪ್ಪ ಕಂಬಳಿ, ಚಂಬಣ್ಣ ಹಾಳದೋಟರ, ಭಗವತಂಪ್ಪ ಪುಟ್ಟನ್ನನವರ, ಚಂಬಣ್ಣ ಸುರಕೋಡ ಹಾಗೂ ಅಣ್ಣಿಗೇರಿ ತಾಲೂಕಿನ ರೈತರು ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಇದ್ದರು.


