ಸುದ್ದಿ

ರಾಜಧಾನಿಯಲ್ಲಿ ಗಣೇಶ ಚತುರ್ಥಿ: ಬಂದೋಬಸ್ತ್​​ಗೆ ಪೊಲೀಸರ ತಯಾರಿ

Share It

ಬೆಂಗಳೂರು: ಗಣೇಶ ಚತುರ್ಥಿಗೆ ಕೆಲವು ದಿನಗಳು ಮಾತ್ರ ಉಳಿದಿದ್ದು, ಅದ್ದೂರಿಯಾಗಿ ಗಣೇಶ ಹಬ್ಬವನ್ನ ಆಚರಿಸಲು ಬೆಂಗಳೂರಿನ ಮಂದಿ ಸಜ್ಜಾಗುತ್ತಿದ್ದಾರೆ. ಇದರ ಜೊತೆಗೆ ಬೆಂಗಳೂರಲ್ಲಿ ಗಣೇಶೋತ್ಸವ ಬಂದೋಬಸ್ತ್​​ಗೆ ಪೊಲೀಸರು ತಯಾರಿ ಶುರು ಮಾಡಿದ್ದಾರೆ.
ಗಣೇಶ ಪ್ರತಿಷ್ಠಾಪನೆಗೆ ಪೊಲೀಸರು ಸೂಕ್ಷ್ಮ, ಅತೀಸೂಕ್ಷ್ಮ ಮತ್ತು ಸಾಮಾನ್ಯ ಏರಿಯಾಗಳೆಂದು 3 ರೀತಿಯಲ್ಲಿ ಸ್ಥಳ ಗುರುತಿಸಿ ದಿನದ 24 ಗಂಟೆಯೂ ಬಂದೋಬಸ್ತ್ ಕೈಗೊಳ್ಳಲು ಸಜ್ಜಾಗಿದ್ದಾರೆ.
ಸೂಕ್ಷ್ಮ ಪ್ರದೇಶಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವ ಪಟ್ಟಿ ತಯಾರಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಚಾಮರಾಜಪೇಟೆ, ಜೆ.ಜೆ ನಗರ, ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ, ಎಸ್.ಜಿ. ಪಾಳ್ಯ, ವಿವೇಕನಗರ, ತಿಲಕ್ ನಗರ, ಬನಶಂಕರಿ, ಆರ್.ಟಿ. ನಗರ, ಜೆ.ಸಿ. ನಗರಗಳಲ್ಲಿ ಗಣೇಶ ಹಬ್ಬದಂದು ಕಟ್ಟೆಚ್ಚರ ವಹಿಸುವಂತೆ ಇನ್ಸ್ಪೆಕ್ಟರ್ ಗಳಿಗೆ ಕಮಿಷನರ್ ಸೂಚನೆ ನೀಡಿದ್ದಾರೆ.

ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಗೆ ಪಿಐಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸೂಕ್ಷ್ಮ ಪ್ರದೇಶಗಳ ಸುತ್ತಮುತ್ತ ಸಿಸಿ ಕ್ಯಾಮರಾ ಕಣ್ಗಾವಲು, ಗಣೇಶೋತ್ಸವ ಆಯೋಜಕರಿಂದ ಮಾಹಿತಿ ಪಡೆಯುವಂತೆ ಸೂಚಿಸಲಾಗಿದೆ. ಸೂಕ್ಷ್ಮ ಪ್ರದೇಶಗಳ ಮೆರವಣಿಗೆಯ ಬ್ಲೂಪ್ರಿಂಟ್ ರೆಡಿ ಮಾಡಬೇಕು. ಮೆರವಣಿಗೆಯ ಪ್ರತಿ ರಸ್ತೆಯಲ್ಲೂ ಸಿಸಿಟಿವಿ ಅಳವಡಿಕೆಗೆ ಸೂಚಿಸಲಾಗಿದೆ. ಹಬ್ಬ, ಮೆರವಣಿಗೆಯ ಪ್ರತಿಯೊಂದು ಕ್ಷಣವೂ ಸೆರೆಹಿಡಿಯುವಂತೆ ಹಾಗೂ ಏರಿಯಾಗಳಲ್ಲಿ ಪೊಲೀಸ್ ಸಿಬ್ಬಂದಿ ಸದಾ ಬೀಟ್ ಇರಬೇಕು ಎಂದು ಸೂಕ್ಷ್ಮ ಪ್ರದೇಶ ಏರಿಯಾಗಳ ಇನ್ಸ್‌ಪೆಕ್ಟರ್​​ಗಳಿಗೆ ಕಮಿಷನರ್ ಸೂಚನೆ ನೀಡಿದ್ದಾರೆ.


Share It

You cannot copy content of this page