ನವದೆಹಲಿ : ದೆಹಲಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆಗೆ ಏರಲು ಕಾಂಗ್ರೆಸ್ ತಂತ್ರಗಳನ್ನು ರೂಪಿಸುತ್ತಿದೆ. ಅಲ್ಲಿನ ಮತದಾರರನ್ನು ಸೆಳೆಯಲು ಯುವ ಉಡಾನ್ ಯೋಜನೆಯಡಿಯಲ್ಲಿ ಯುವಕರಿಗೆ ವಾರ್ಷಿಕ 8,500 ರೂ ನೀಡುವಂತೆ ಘೋಷಣೆ ಮಾಡಿದೆ.
ಈಗಾಗಲೇ ಕಾಂಗ್ರೆಸ್ ಪ್ಯಾರಿ ದೀದಿ, ಜೀವನ್ ರಕ್ಷಾ, ಆರೋಗ್ಯ ವಿಮೆಯಂತಹ ವಿವಿಧ ಪ್ರಾಣಲಿಕೆಗಳನ್ನು ನೀಡಿದೆ. ಯುವ ಮತದಾರರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಯೋಜನೆಯನ್ನು ಮಾಡಲಾಗುತ್ತಿದೆ. ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿರುವ ಯುವಕ ಮತ್ತು ಯುವತಿಯರು ಈ ಯೋಜನೆಯಿಂದ ಲಾಭ ಪಡೆಯಲಿದ್ದಾರೆ. ನಿರುದ್ಯೋಗಿಗಳಿಗೆ ಅಲ್ಲ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ತಿಳಿಸಿದ್ದಾರೆ.
ಕೇಜ್ರಿವಾಲ್ ಮಾತನಾಡಿ , ಬಿಜೆಪಿಗೆ ನಿಮ್ಮ ಮತಗಳು ಮಾತ್ರ ಬೇಕು. ನೀವು ಮತ ಹಾಕಿದ ನಂತರ ನಿಮ್ಮ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಾರೆ. ಅವರು ನಿಮ್ಮ ಕಲ್ಯಾಣವನ್ನು ಬಯಸುವುದಿಲ್ಲ ಎಂದು ಪತ್ರಿಕಾ ಗೋಷ್ಠಿಯಲ್ಲಿ ಟೀಕಿಸಿದರು.