ರಂಗಭೂಮಿ ಕಲೆ ದೇಶದ ಆಸ್ತಿ, ಅದನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ನಟರಾಜ್ ಎಂ. ಎನ್. ಆರ್. ಅಭಿಮತ.
ಹೊಸಕೋಟೆ: ರಂಗಭೂಮಿ ನಾಟಕ ಕಲೆಯೂ ಈ ದೇಶದ ಆಸ್ತಿಯಾಗಿದ್ದು ಇದನ್ನು ಉಳಿಸಿಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೊಸಕೋಟೆ ತಾಲೂಕು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕರಾದ ನಟರಾಜ್ ಎಮ ಎನ್ ಆರ್ ರವರು ತಿಳಿಸಿದರು.
ತಾಲೂಕಿನ ಅತ್ತಿವಟ್ಟ ಗ್ರಾಮದ ವೇಣುಗೋಪಾಲ ಸ್ವಾಮಿ ದೇವಾಲಯದ ಬಯಲು ರಂಗAಮದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಮನೆ ಬಾಗಿಲಿಗೆ ರಂಗಭೂಮಿ ಕಲೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಂಗಭೂಮಿ ಕಲೆ ಈ ದೇಶದ ಆಸ್ತಿ. ಇದರಲ್ಲಿ ಜೀವನದ ಸಾರವು ಅಡಗಿದೆ. ಆದರೆ ಇತ್ತೀಚಿಗೆ ಯುವಕರು ಇತ್ತ ಆಸಕ್ತಿ ಕಳೆದು ಕೊಂಡಿರುವುದು ಬೇಸರದ ಸಂಗತಿ. ಇದಕ್ಕೆ ಪುನಶ್ಚೇತನ ನೀಡುವ ಸಲುವಾಗಿ ಮನೆಬಾಗಿಲಿಗೆ ರಂಗಭೂಮಿ ಕಲೆ ಎಂಬ ಪರಿಕಲ್ಪನೆಯೊAನದಿಗೆ ಪ್ರತಿ ತಿಂಗಳು ಒಂದೊAದು ಗ್ರಾಮದಲ್ಲಿ ರಂಗಗೀತೆ ಮತ್ತು ನಾಟಕದ ತಾಲೀಮಿನೊಂದಿಗೆ ರಂಗಭೂಮಿ ನಾಟಕದತ್ತ ಸೆಳೆಯುವ ಪ್ರಯತ್ನ ಮಾಡಲಾಗುತ್ತದೆ ಎಂದರು.
ರಂಗಭೂಮಿ ನಾಟಕ ನಿರ್ದೇಶಕ ಏಳಗಳ್ಳಿ ಪರಮ ಶಿವಯ್ಯ ಮಾತನಾಡಿ ನಾಟಕ ಪ್ರದರ್ಶನಕ್ಕೆ ಹೆಚ್ಚುತ್ತಿರುವ ಖರ್ಚುಗಳು ಒಂದೆಡೆಯಾದರೆ ಸಿನಿಮಾ, ಧಾರಾವಾಹಿ ಮತ್ತು ಸಾಮಾಜಿಕ ಜಾಲತಾಣದ ಮೇಲಿನ ಆಕರ್ಷಣೆ ಒಂದಡಡೆಯಾದರೆ ಧೀರ್ಘ ಸಮಯದ ಪ್ರದರ್ಶನ, ರಂಗAಮದಿರಗಳ ಕೊರತೆ, ರಾತ್ರಿ ಸಮಯದಲ್ಲೆ ಹೆಚ್ಚು ಪ್ರದರ್ಶನ, ನಿದ್ದೆಕೆಡುವ ಸಂಭವ, ಹೆಚ್ಚಿದ ಖರ್ಚುಗಳು, ಮಳೆಯ ಕಾರಣದಿಂದ ರದ್ದುಗೊಳ್ಳುವ ನಾಟಕ ಪ್ರದರ್ಶನ ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಕಡಿತಗೊಂಡ ಸರ್ಕಾರದ ಪ್ರೋತ್ಸಾಹ ಇವೆಲ್ಲಾ ಕಾರಣಗಳಿಂದ ರಂಗಕಲೆಗೆ ಹಿನ್ನಡೆಯಾಗುತ್ತಿದೆ. ಆ ನಿಟ್ಟಿನಲ್ಲಿ ರಂಗಕಲೆ ಉಳಿಯಬೇಕಾದರೆ ಸರ್ಕಾರ, ಸಂಘ ಸಂಸ್ಥೆಗಳು ಮತ್ತು ಯುವಕರ ಪ್ರೋತ್ಸಾಹ ಹೆಚ್ಚು ಅತ್ಯಗತ್ಯ ಎಂದರು.
ಈ ಸಂಧರ್ಭದಲ್ಲಿ ತಬಲವಾದಕರಾದ ಭುವನ್ ಆರಾಧ್ಯ, ಸೋಲೆಕ್ಸ್ ವಾದಕರಾದ ಮಿಮಿಕ್ರಿ ರಾಜು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಬಸವರಾಜ, ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ, ನಿರ್ದೇಶಕ ಮೈಲಾಪುರ ನಾಗರಾಜ್, ಈಶ್ವರ್ ರಾವ್ ಶಂಭುಲಿAಗಪ್ಪ ಕಲಾವಿದರಾದ ಅಂಗಡಿ ಮಂಜುನಾಥ್ ಬಸವರಾಜ್, ಅನಂತರಾಜು ರವಿಕುಮಾರ್, ಮುನಿಸ್ವಾಮಿಗೌಡ,ಕುಮಾರ್ ಅಜಯ್ ಇತರರು ಇದ್ದರು


