ಅಪರಾಧ ಸಿನಿಮಾ ಸುದ್ದಿ

ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸೆ.27 ಕ್ಕೆ ಮುಂದೂಡಿಕೆ

Share It

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-2 ಆರೋಪಿಯಾಗಿ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ್ ಅವರ ಜಾಮೀನು ಅರ್ಜಿ‌ ‌ವಿಚಾರಣೆಯನ್ನು ನಗರದ 57ನೇ CCH ಕೋರ್ಟ್ ಸೆಪ್ಟೆಂಬರ್ 27 ಕ್ಕೆ ಮುಂದೂಡಿದೆ.

ಸೋಮವಾರಕ್ಕೆ ಮುಂದೂಡಿಕೆಯಾಗಿದ್ದ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಪುನರಾಂಭಿಸಿದ 57ನೇ CCH ಕೋರ್ಟ್ ವಾದ-ಪ್ರತಿವಾದ ಮಂಡನೆ ನಂತರ ವಿಚಾರಣೆಯನ್ನು ಸೆಪ್ಟೆಂಬರ್ 27 ಕ್ಕೆ ಮುಂದೂಡಿತು.

ಇದರಿಂದ ಇಂದು ಜಾಮೀನು ಸಿಗುತ್ತದೆ ಎಂದು ನಿರೀಕ್ಷಿಸಿದ್ದ ದರ್ಶನ್ ಅವರಿಗೆ ಸೆಪ್ಟೆಂಬರ್ 27 ರವರೆಗೆ ಜೈಲಿನ ಸೆರೆವಾಸವೇ ಗತಿ ಆಗಿದೆ.


Share It

You cannot copy content of this page