ನಾವು ಆಹಾರದಲ್ಲಿ ಕಲಬೆರಕೆಯನ್ನು ನೋಡಿರುತ್ತೇವೆ. ಪ್ಲ್ಯಾಸ್ಟಿಕ್ ಅಕ್ಕಿ, ಪ್ಲ್ಯಾಸ್ಟಿಕ್ ಮೊಟ್ಟೆ ಈಗ ಸಿಮೆಂಟ್ ಬೆಳ್ಳುಳ್ಳಿ ಪತ್ತೆಯಾಗಿದೆ. ಸಿಮೆಂಟ್ ಬೆಳ್ಳುಳ್ಳಿ ಎಂದು ಅಚ್ಚರಿಯಾಗುತ್ತಿದೆಯ. ಹೌದು ಸದ್ಯಕ್ಕೆ ನಕಲಿ ಬೆಳ್ಳುಳ್ಳಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಮಹಾರಾಷ್ಟ್ರದ ಅಂಕೋಲಾ ಜಿಲ್ಲೆಯಲ್ಲಿ ನಕಲಿ ಬೆಳ್ಳುಳ್ಳಿ ಪತ್ತೆಯಾಗಿದೆ. ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ ಯಾಗಿರುವುದರಿಂದ ಇದೆ ವೇಳೆ ಮಾರಾಟಗಾರರು ಹೆಚ್ಚು ಲಾಭ ಗಳಿಸಲು ಹೀಗೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಅಂಕೋಲದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಪತ್ನಿ ಮಾರುಕಟ್ಟೆಯಲ್ಲಿ ತರಕಾರಿ ಕೊಳ್ಳಲು ಹೋದಾಗ ಬೆಳ್ಳುಳ್ಳಿಯನ್ನು ಕೊಂಡಿದ್ದಾರೆ. ಮನೆಗೆ ಬಂದ ಬಳಿಕ ಬೆಳ್ಳುಳ್ಳಿಯನ್ನು ಹಚ್ಚುವಾಗ ಅದು ಸಿಮೆಂಟ್ ನಿಂದ ಮಾಡಿದ ಬೆಳ್ಳುಳ್ಳಿ ಎಂದು ಗೊತ್ತಾಗಿದೆ.
ಜೊತೆಗೆ ಮೊಟ್ಟೆಗಳ ನಕಲಿ ಸಹ ಅಧಿಕವಾಗಿ ಕಾಣುತ್ತಿದೆ. ಬೆಂಗಳೂರಿನಲ್ಲಿ ನಿತ್ಯ 75 ಸಾವಿರ ಮೊಟ್ಟೆಗಳ ಅವಶ್ಯಕತೆ ಇದೆ. ಈ ಕಾರಣಕ್ಕೆ ಮಾರಾಟಗಾರರು ಹೆಚ್ಚಿನ ಲಾಭವನ್ನು ಗಳಿಸಲು ನಕಲಿ ಮೊಟ್ಟೆ ಮಾರುಕಟ್ಟೆಗೆ ತರುತ್ತಿದ್ದಾರೆ.

