ನಕಲಿ ಚಿನ್ನದ ನಾಣ್ಯ ಮಾರಾಟ ಮಾಡಿ ವಂಚನೆ: ದಾವಣಗೆರೆ ಮೂಲದ ವ್ಯಕ್ತಿ ಬಂಧನ
ಚಿಕ್ಕಮಗಳೂರು: ನಕಲಿ ಚಿನ್ನದ ನಾಣ್ಯಗಳನ್ನು ಅಸಲಿ ಎಂದು ನಂಬಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬೀರೂರು ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಚನ್ನಗಿರಿ ಮೂಲದ ರಾಜಪ್ಪ ಬಂಧಿತನಾಗಿರುವ ಆರೋಪಿ. ಈತ ಕಡಿಮೆ ಬೆಲೆ ಚಿನ್ನದ ನಾಣ್ಯಗಳನ್ನು ಮಾರಾಟ ಮಾಡುವುದಾಗಿ ನಂಬಿಸಿ, ಅವರಿಗೆ ನಕಲಿ ಚಿನ್ನದ ನಾಣ್ಯ ಮಾರಾಟ ಮಾಡಯತ್ತಿದ್ದ ಎಂದು ಹೇಳಲಾಗುತ್ತಿದೆ.
ತಮಿಳುನಾಡಿನಿಂದ ಬೀರೂರು ಪಟ್ಟಣಕ್ಕೆ ವ್ಯಕ್ತಿಯೊಬ್ಬರನ್ನಿ ಕರೆಸಿ ವಂಚನೆ ಮಾಡಿರುವ ಸಂಬಂಧ ತಮಿಳುನಾಡಿನ ವ್ಯಕ್ತಿಯೊಬ್ಬರು ಬೀರೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ರಾಜಪ್ಪನನ್ನು ಬಂಧಿಸಿದ್ದಾರೆ.
ಚಿನ್ನದ ನಾಣ್ಯಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇನೆ ಎಂದು ಆಮಿಷವೊಡ್ಡಿ ತಮಿಳುನಾಡಿನಿಂದ ವ್ಯಕ್ತಿಯೊಬ್ಬರನ್ನು ರಾಜಪ್ಪ ಬೀರೂರಿಗೆ ಕರೆಸಿಕೊಂಡಿದ್ದ. ಅಲ್ಲಿ ಬಂದಾಗ ನಕಲಿ ನಾಣ್ಯ ನೀಡಿ ಹಣ ಪಡೆದಿದ್ದ ಎನ್ನಲಾಗಿದೆ.
ನಾಣ್ಯದ ಬಗ್ಗೆ ಅನುಮಾನಗೊಂಡ ವ್ಯಕ್ತಿ ಪರೀಕ್ಷೆ ನಡೆಸಿದಾಗ, ಅದು ನಕಲಿ ಎಂದು ಗೊತ್ತಾಗಿದೆ. ಹೀಗಾಗಿ, ಬೀರೂರು ಪೊಲೀಸ್ ಠಾಣೆಯಲ್ಲಿ ತನಗೆ ವಂಚನೆಯಾಗಿರುವ ಕುರಿತು ದೂರು ನೀಡಿದ್ದಾನೆ. ಪೊಲೀಸರು ರಾಜಪ್ಪನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


