ಮಂಡ್ಯ: ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಹಿಂಸಾಚಾರ, ಗಲಭೆ ಸ್ಥಳಕ್ಕೆ ಕೇಂದ್ರ ಸಚಿವ ಹೆಚ್’ಡಿ.ಕುಮಾರಸ್ವಾಮಿ ಗುರುವಾರ ಭೇಟಿ ನೀಡಿಮಾಹಿತಿ ಪಡೆದುಕೊಂಡರು.
ಗಲಭೆಯಿಂದ ಹಾನಿಗೊಳಗಾದ ಅಂಗಡಿಗಳ ಮಾಲೀಕರೊಂದಿಗೆ ಕೇಂದ್ರ ಸಚಿವರು ಮಾತನಾಡಿದರು.
ನಾನು ಈ ರೀತಿಯ ಅವಾಂತರ ಸಂಭವಿಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ, ಸಮಾಜದ ಶಾಂತಿ ಕದಡುವ ಯಾರನ್ನೂ ನಾನು ಬೆಂಬಲಿಸುವುದಿಲ್ಲ. ಸಮುದಾಯಗಳು ಸಹೋದರ ಸಹೋದರಿಯರಂತೆ ಬಾಳಬೇಕ. ಇದು ನನ್ನ ದೃಷ್ಟಿಯಾಗಿದೆ. ಸ್ಥಳಕ್ಕೆ ಭೇಟಿ ನೀಡಿ ನೆಲದ ವಾಸ್ತವತೆಯನ್ನು ನೋಡಬೇಕೆನಿಸಿತು. ಹೀಗಾಗಿ ಭೇಟಿ ನೀಡಿದ್ದೇನೆ.
ಎಸ್ಪಿ ಮತ್ತು ಜಿಲ್ಲಾಡಳಿತ ಮಂಡಳಿ ಉತ್ತಮ ಕೆಲಸ ಮಾಡಿದೆ, ಅವರ ಮಧ್ಯಸ್ಥಿಕೆ ಮತ್ತು ತಕ್ಷಣದ ಕ್ರಮದಿಂದಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ನಾನು ಅನಗತ್ಯವಾಗಿ ದೂಷಿಸಲು ಬಯಸುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಕುಮಾರಸ್ವಾಮಿಯವರಿಗೆ ಮಾಜಿ ಶಾಸಕರಾದ ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ, ಅನ್ನದಾನಿ ಸಾಥ್ ನೀಡಿದರು.