ಕ್ರೀಡೆ ಸುದ್ದಿ

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಆರ್ ಸಿ ಬಿ ಕಣ್ಣಿಡಬಹುದಾದ ಆಟಗಾರರು ಯಾರು?

Share It

ಆರ್ ಸಿಬಿ ಐಪಿಎಲ್ ನಲ್ಲಿಯೇ ಅತ್ಯಂತ ಹೆಸರುವಾಸಿಯಾದ ತಂಡ. 17 ವರ್ಷಗಳಿಂದಲೂ ಒಂದು ಟ್ರೊಫಿ ಗೆಲ್ಲದಿದ್ದರೂ ತನ್ನದೇ ಆದಂಥಹ ವಿಶೇಷ ಅಭಿಮಾನಿ ಬಳಗವನ್ನು ಹೊಂದಿರುವ ಏಕೈಕ ತಂಡ.

2025ರಲ್ಲಿ ನೆಡೆಯಲಿರುವ ಮೆಗಾ ಹರಾಜಿನಲ್ಲಿ ಆರ್ ಸಿ ಬಿ ಖರೀದಿ ಮಾಡಬಹುದಾದ ಕೆಲವು ಪ್ರಮುಖ ಆಟಗಾರರೆಂದರೆ..

01. ಕೆ.ಎಲ್ ರಾಹುಲ್
ಸದ್ಯದಲ್ಲಿ ಕನ್ನಡಿಗ ಕೆ. ಎಲ್ ರಾಹುಲ್ ಲಾಕ್ನೌ ಪರ ನಾಯಕನಾಗಿ ತಂಡವನ್ನು ಕಳೆದ ಎರಡು ಆವ್ರುತ್ತಿಯಲ್ಲಿ ಮುನ್ನೆಡೆಸಿದ್ದಾರೆ. ಎಲ್ ಎಸ್ ಜಿ ಪ್ರಾಂಚೈಸಿ ಮಾಲೀಕರಿಗೂ ಮತ್ತು ರಾಹುಲ್ ಅವರ ನಡುವಿನ ಸಂಬಂಧ ಅದಗೆಟ್ಟಿದೆ ಎಂಬ ಮಾಹಿತಿಗಳು ಹರಿದಾಡುತ್ತಿದ್ದವು. ಈ ಕಾರಣದಿಂದದರೂ ರಾಹುಲ್ ಅವರನ್ನು ತಂಡದಿಂದ ಕೈ ಬಿಟ್ಟರೆ ಆರ್ ಸಿ ಬಿ ರಾಹುಲ್ ಮೇಲೆ ಒಂದು ಕಣ್ಣು ಇಡುವುದರಲ್ಲಿ ಅನುಮಾನವೇ ಇಲ್ಲ.

02.ದುನಿತ್ ವೆಲ್ಲಲಿಗೆ
ಶ್ರೀಲಂಕಾದ ಯುವ ಆಲ್ ರೌಂಡರ್ ಎಷ್ಯಾ ಕಪ್ ನಲ್ಲಿ ಟೀಮ್ ಇಂಡಿಯಾದ ಬ್ಯಾಟರ್ ಗಳನ್ನು ಕಾಡಿದ ಸ್ಪಿನ್ನರ್ ಈತ. ಯುಜುವೇಂದ್ರ ಚಹಲ್ ಆರ್ ಸಿಬಿ ತೊರೆದ ನಂತರ ಆರ್ ಸಿಬಿ ಯ ಸ್ಪಿನ್ ದಾಳಿ ಅಷ್ಟೇನು ಬಲಿಷ್ಠವಾಗಿ ಕಂಡಿಲ್ಲ ಆ ಕಾರಣದಿಂದ ವೆಲ್ಲಲಿಗೆಯನ್ನು ಖರೀದಿಸುವಲ್ಲಿ ಆರ್ ಸಿ ಬಿ ಮುಂದಾಗಿದೆ.

03.ಮಿಚೆಲ್ ಸ್ಟಾರ್ಕ್
ಆಸ್ಟ್ರೇಲಿಯಾದ ಎಡಗೈ ಗನ್ ಬೌಲರ್, ಕಳೆದ ಆವ್ರುತ್ತಿಯಲ್ಲಿ ದುಬಾರಿ ಆಟಗಾರ. ಕೆಕೆಆರ್ ಪರ ಕಳೆದ ವರ್ಷ ಅಷ್ಟೇನು ಪ್ರದರ್ಶನ ನೀಡಿಲ್ಲ. ಹಾಗಾಗಿ ಕೆಕೆಆರ್ ಈ ವರ್ಷ ಮಿಚೆಲ್ ಸ್ಟಾರ್ಕ್ ಅವರನ್ನು ಕೈ ಬಿಡುವ ಸಾದ್ಯತೆಗಳು ಹೆಚ್ಚಿವೆ. 2015 ಅವ್ರುತ್ತಿಯಲ್ಲಿ ಮಿಚೆಲ್ ಸ್ಟಾರ್ಕ್ ಆರ್ ಸಿ ಬಿ ಪರ ಆಡಿದ್ದರು. ಈಗಲೂ ಸಹ ಖರೀದಿಸುವ ಅನುಮಾನಗಳು ಹೆಚ್ಚಿವೆ.

04. ಕರುಣ್ ನಾಯರ್.
ಆರ್ ಸಿಬಿ ಪಾಳಯ ಸೇರಬಲ್ಲ ಮತ್ತೊಬ್ಬ ಕನ್ನಡಿಗ ಎಂದರೆ ಕರುಣ್ ನಾಯರ್. ಮಹಾರಾಜ ಟ್ರೊಫಿಯಲ್ಲಿ ಭರ್ಜರಿ ಶತಕದೊಂದಿಗೆ ಉತ್ತಮ ಫಾರ್ಮ್ನಲ್ಲಿರುವ ಕರುಣ್ ನಾಯರ್ ಅವರನ್ನು ಆರ್ ಸಿಬಿ ಮುಂಬರುವ ಮೆಗಾ ಹರಾಜಿನಲ್ಲಿ ಖರೀದಿಸುವುದರಲ್ಲಿ ಅನುಮಾನವೇ ಇಲ್ಲ.


Share It

You cannot copy content of this page