ಉಪಯುಕ್ತ ಸುದ್ದಿ

ರೈಲ್ವೇ ಇಲಾಖೆಯಲ್ಲಿ 8113 ಹುದ್ದೆಗಳಿಗೆ ಅರ್ಜಿ ಆಹ್ವಾನ!

Share It

ಭಾರತೀಯ ರೈಲು ಇಲಾಖೆಯಲ್ಲಿ ಕೆಲಸ ಮಾಡಬೇಕು ಅನ್ನೋರಿಗೆ ಒಳ್ಳೆ ಅವಕಾಶ ನೋಡಿ. ಭಾರತೀಯ ರೈಲ್ವೆಯು ಈ ಹಿಂದೆ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿಯ ಹುದ್ದೆಗೆ ಅಧಿಸೂಚನೆಯನ್ನು ಹೊರಡಿಸಿತ್ತು. ಈಗ ಪರಿಪೂರ್ಣವಾದ ಅಧಿಸೂಚಿಯನ್ನು ಹೊರಡಿಸಿದ್ದು ಗ್ರಾಜುಯೇಟ್‌ ಕೆಟಗರಿ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಇಂದಿನಿಂದ ಅವಕಾಶ ಮಾಡಿಕೊಟ್ಟಿದೆ.

ಒಟ್ಟು 8113 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಯಾವುದೇ ಪದವಿಯನ್ನು ಪಾಸ್ ಆಗಿರುವ ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಉದ್ಯೋಗಕ್ಕೆ ಕುರಿತಂತೆ ವಯೋಮಿತಿ, ವೇತನ ಹಾಗೂ ಆಯ್ಕೆಯ ಪ್ರಕ್ರಿಯೆಯನ್ನು ನೋಡೋಣ ಬನ್ನಿ.

ಹುದ್ದೆಗಳ ವಿವರ

  1. ಚೀಪ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್‌ವೈಸರ್ – 1736
  2. ಸ್ಟೇಷನ್‌ ಮಾಸ್ಟರ್ – 994
  3. ಗೂಡ್ಸ್‌ ಟ್ರೈನ್ ಮ್ಯಾನೇಜರ್ – 3114
    4 . ಜೂನಿಯರ್ ಅಕೌಂಟ್ ಅಸಿಸ್ಟಂಟ್‌ ಕಮ್ ಟೈಪಿಸ್ಟ್‌ – 1507
  4. ಸೀನಿಯರ್ ಕ್ಲರ್ಕ್‌ ಕಮ್ ಟೈಪಿಸ್ಟ್‌ – 732

ಒಟ್ಟು ಹುದ್ದೆಗಳು -8113

ಆರ್ಜಿ ಸಲ್ಲಿಸಲು ಕೊನೆಯ ದಿನಾಂಕ
13-10-2024

ವಯೋಮಿತಿ

ಕನಿಷ್ಠ 18 ವರ್ಷ ಗರಿಷ್ಠ 36 ವರ್ಷ ಹೊಂದಿರಬೇಕು.
ಒಬಿಸಿ ಗೆ 3 ವರ್ಷ SC,ST, ಹಾಗೂ ಪ್ರವರ್ಗ 1 ಕ್ಕೆ 5 ವರ್ಷ ವಯಸ್ಸಿನ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿಯ ಶುಲ್ಕದ ಬಗ್ಗೆ

ಸಾಮಾನ್ಯ ಅಭ್ಯರ್ಥಿಗಳು ಹಿಂದುಳಿದ ವರ್ಗದವರಿಗೆ ರೂ. 500, SC,ST, ಮಾಜಿ ಸೈನಿಕರು, ಆರ್ಥಿಕವಾಗಿ ಹಿಂದುಳಿದವರಿಗೆ 250 ರೂ ಅರ್ಜಿ ದರವನ್ನು ನಿಗದಿಪಡಿಸಲಾಗಿದೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಸಿಬಿಟಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಅರ್ಜಿಯ ಶುಲ್ಕ ಮರುಪಾವತಿ ಯಾಗುತ್ತದೆ.

ಅರ್ಜಿಯನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ,

www.rrbbnc.gov.in


Share It

You cannot copy content of this page