ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಬಿಬಿಎಂಪಿ ಪಶುಸಂಗೋಪನಾ ಇಲಾಖೆಯು ಸಹಾಯವಾಣಿ ಪ್ರಾರಂಭಿಸಿದೆ.
6364893322 ಹಾಗೂ 1533 ಸಹಾಯವಾಣಿ ಬಿಡುಗಡೆ ಮಾಡಿರುವ ಪಾಲಿಕೆ, ಇದರ ಜೊತೆಗೆ ಬಿಬಿಎಂಪಿ ವ್ಯಾಪ್ತಿಯ ಡಾಗ್ ಕೆನಲ್ ಹೆಚ್ಚಳಕ್ಕೂ ತಯಾರಿ ನಡೆಸಿದೆ.
ಪಾಲಿಕೆ ಮುಖ್ಯ ಆಯುಕ್ತರು ಬಿಬಿಎಂಪಿಯ ಪಶುಪಾಲನ ಇಲಾಖೆ ಮೂಲಕ ಬೀದಿನಾಯಿಗಳ ಕಡಿತ ಹಾಗೂ ರೇಬಿಸ್ಗೆ ಹೆಲ್ಪ್ ಲೈನ್ ನಂಬರ್ ಬಿಡುಗಡೆ ಮಾಡಿ ಪ್ರಕಟಣೆ ಹೊರಡಿಸಿದ್ದಾರೆ.
ಬೀದಿ ನಾಯಿ ಹಾಗೂ ರೇಬಿಸ್ ಹಾವಳಿಯನ್ನು ವೈಜ್ಞಾನಿಕವಾಗಿ ಮತ್ತು ಪರಿಣಾಮಕಾರಿಯಾಗಿ ನಿಯಂತ್ರಿಸಲು ಪಶುಸಂಗೋಪನಾ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ನಿಗಮದ ವ್ಯಾಪ್ತಿಯ ಎಲ್ಲಾ ವಲಯಗಳಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ, ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ ಮತ್ತು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಸಾಕು ನಾಯಿಗಳ ನಿಯಮಗಳು – 2023 ರ ಮಾರ್ಗಸೂಚಿಗಳ ಪ್ರಕಾರ ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಆರೋಗ್ಯ, ನೈರ್ಮಲ್ಯ ಮತ್ತು ಪಶು ಸಂಗೋಪನೆ ವಿಶೇಷ ಆಯುಕ್ತ ಸುರಳಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

