“ಅನ್ನಭಾಗ್ಯ”ಕ್ಕೆ ಅಕ್ಕಿ ನೀಡಲು ಮುಂದಾದ ಕೇಂದ್ರ : ನಂಬುತ್ತಿಲ್ಲ ರಾಜ್ಯ ಸರಕಾರ !
ಬೆಂಗಳೂರು: ಈಗಾಗಲೇ ರಾಜ್ಯ ಸರ್ಕಾರ ಘೋಷಣೆ ಮಾಡಿರುವಂತೆ 10 ಕೆಜಿ ಅಕ್ಕಿ ನೀಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿರುವುದು ಗೊತ್ತೇ ಇದೆ. ಅಕ್ಕಿ ವಿತರಣೆಗೆ ಸಾಕಾಗುವಷ್ಟು ಅಕ್ಕಿ ಪೂರೈಕೆಯಾಗದ ಕಾರಣ ಅಕ್ಕಿಗೆ ಹಣ ಎಂದು ಸರ್ಕಾರ ಹೇಳುತ್ತಿದೆ. ಸದ್ಯ ಕೇಂದ್ರ ಸರ್ಕಾರ 1 ಕೆಜಿ ಅಕ್ಕಿಗೆ 28 ರೂ ನಂತೆ ರಾಜ್ಯಕ್ಕೆ ನೀಡಲು ಸಿದ್ಧವಿದೆ. ಆದ್ರೆ ರಾಜ್ಯಸರ್ಕಾರ ಮಾತ್ರ ಖರೀದಿಗೆ ಆಸಕ್ತಿ ತೋರದೆ ಇರುವುದು ಪ್ರಶ್ನಾರ್ಹ.
ಗ್ಯಾರಂಟಿಗಳಲ್ಲಿ ಒಂದಾದ ಅನ್ನ ಭಾಗ್ಯವನ್ನು ಘೋಷಣೆ ಮಾಡಿದ ನಂತರ ಕೇಂದ್ರದಿಂದ ಅಕ್ಕಿಯನ್ನು ಖರೀದಿ ಮಾಡುವುದಾಗಿ ಹೇಳಿತ್ತು. ಆದರೆ ಕೇಂದ್ರ ಇದನ್ನು ವಿರೋಧಿಸಿ ಅಕ್ಕಿ ಕೊಡಲು ನಿರಾಕರಿಸಿತ್ತು. ಕೇಂದ್ರ ಅಕ್ಕಿಯ ದಾಸ್ತಾನನ್ನು ಹರಾಜಿನ ಮೂಲಕ ಮಾರಾಟ ಮಾಡಿದ್ದು ಸಿದ್ದು ಸೇರಿದಂತೆ ಇತರರನ್ನು ಸಿಟ್ಟಿಗೆ ಕಾರಣವಾಗಿತ್ತು. ಈಗ ಕರ್ನಾಟಕದ ಪ್ರಹ್ಲಾದ್ ಜೋಷಿ ಯವರೇ ಕೇಂದ್ರ ಆಹಾರ ಸಚಿವರಾಗಿದ್ದ ಕರ್ನಾಟಕಕ್ಕೆ ರೂ. 28 ರ. ವೆಚ್ಚದಲ್ಲಿ ಅಕ್ಕಿ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಆದ್ರೆ ಸರ್ಕಾರ ಮಾತ್ರ ಇದನ್ನ ತಳ್ಳಿ ಹಾಕುತ್ತಿದೆ.
ತಿಂಗಳಿಗೆ 890 ಕೋಟಿ ವೆಚ್ಚ ಮಾಡಬೇಕಿದೆ.
ಸರ್ಕಾರ ಅನ್ನ ಭಾಗ್ಯ ಯೋಜನೆ ನೀಡಬೇಕಾದರೆ ತಿಂಗಳಿಗೆ 890 ಕೋಟಿ ಹಣವನ್ನು ವ್ಯಹಿಸಬೇಕಿದೆ. ವರ್ಷಕ್ಕೆ 10,092 ಕೋಟಿ ವ್ಯಯ ಮಾಡಬೇಕಿದೆ. ಸದ್ಯಕ್ಕೆ 5 ಕೆಜಿ ಅಕ್ಕಿಯ ಬದಲು 170 ರೂಪಾಯಿ ಖಾತೆಗೆ ಜಮಾ ಮಾಡಲಾಗುತ್ತಿದೆ. ನೇರವಾಗಿ ಖಾತೆಗೆ ಹಣ ಪಾವತಿ ಯಾಗುತ್ತಿರುವುದರಿಂದ ಭ್ರಷ್ಟಚಾರಕ್ಕೆ ಆಸ್ಪದವಿಲ್ಲ. ಸಾಗಣಿಕೆ ವೆಚ್ಚ ಪ್ರತಿ ಕೆಜಿಗೆ 2.30 ರೂ ಉಳಿಯಲಿದೆ.
2.36 ಲಕ್ಷ ಟನ್ ಅಕ್ಕಿ ಬೇಕು.
ಕೇಂದ್ರ ಸರ್ಕಾರದಲ್ಲಿ ಅವಶ್ಯಕ ಅಕ್ಕಿಯ ಸಂಗ್ರಹ ಇದ್ದು 29 ರೂ ಅನ್ನು 28 ಕ್ಕೆ ಇಳಿಕೆ ಮಾಡಿ ರಾಜ್ಯ ಸರ್ಕಾರಕ್ಕೆ. ನೀಡಲು ಒಪ್ಪಿದೆ. ಇದು ನಿರಂತರವಾಗಿ ಲಭ್ಯ ವಾಗಲಿದೆಯ ಎಂಬುದು ರಾಜ್ಯ ಸರ್ಕಾರದ ಪ್ರಶ್ನೆಯಾಗಿದೆ.
ತೊಗರಿಬೇಳೆ, ಎಣ್ಣೆ ಉಪ್ಪು ವಿತರಣೆಗೆ ಚಿಂತನೆ
ಬಿಪಿಎಲ್ ಕಾರ್ಡ್ ಬಳಕೆದಾರರಿಗೆ 5 ಕೆಜಿ ಅಕ್ಕಿಯ ಬದಲಾಗಿ ತೊಗರಿ ಬೇಳೆ, ತಾಳೆ ಎಣ್ಣೆ, ಉಪ್ಪನ್ನು ನೀಡಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಇದರಿಂದ ಹಣದ ದುರೋಪಯೋಗ ತಡೆಯಬಹುದಾಗಿದೆ. ಉತ್ತಮ ಪೋಷಕಾಂಶಗಳು ಸಹ ದೊರೆಯುತ್ತವೆ ಎಂದು ಹೇಳುತ್ತಿದೆ. ಗುಜರಾತ್ ನಿಂದ ಉಪ್ಪು ತರಿಸಿಕೊಳ್ಳಲು ತಯಾರಿ ನಡೆಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.


