ಡೆಹ್ರಾಡೂನ್: ಮೂಕ ಮತ್ತು ಶ್ರಾವಣ ದೋಷವುಳ್ಳ 9 ವರ್ಷದ ಬಾಲಕಿಯ ಮೇಲೆ ನೆರೆ ಹೊರೆಯ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿರುವ ಘಟನೆ ಡೆಹ್ರಾಡೂನ್ ನಲ್ಲಿ ನಡೆದಿದೆ.
ಆರೋಪಿಯು 20 ವರ್ಷದ ಯುವಕನಾಗಿದ್ದು, ಬೀದಿ ಬದಿ ವ್ಯಾಪಾರವನ್ನು ಮಾಡುತ್ತಿದ್ದನು. ಬಾಲಕಿಯು ಕೊಠಡಿಯಲ್ಲಿ ಒಬ್ಬಳೆ ಇರುವ ವೇಳೆ ಕೃತ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಕುಟುಂಬ ಪೊಲೀಸರಿಗೆ ತಿಳಿಸಿದೆ.
ಅತ್ಯಾಚಾರಕ್ಕೊಳಗಾದ ಬಾಲಕಿಯ ತಾಯಿ ಮನೆಗೆಲಸಕ್ಕೆ ಹೋಗಿದ್ದು. ಮಗಳನ್ನು ಚಿಕ್ಕಮ್ಮನ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ.
ಈ ವೇಳೆ ಘಟನೆ ನಡೆದಿದ್ದು, ಇದಾದ ನಂತರ ಅವರ ಚಿಕ್ಕಪ್ಪ ಮತ್ತು ನೆರೆಹೊರೆಯವರು ಆರೋಪಿಯನ್ನು ಬಂಧಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಬಂಧಿಸಿ 14 ದಿನಗಳ ಕಾಲ ನ್ಯಾಯಾಲಯ ಬಂಧನದಲ್ಲಿ ಇಡಲಾಗಿದೆ.
ಬಾಲಕಿ ಮೇಲೆ ಈ ಹಿಂದೆ ಮೂರು ಬಾರಿ ಅತ್ಯಾಚಾರ ವೇಸಗಿರುವುದಾಗಿ ಆರೋಪಿಯು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಚಂದ್ರಭಾನ್ ಸಿಂಗ್ ತಿಳಿಸಿದ್ದಾರೆ.